ನ್ಯೂಸ್

AI ಬಳಸಿ 36 ವಿದ್ಯಾರ್ಥಿನಿಯರ ಮಾರ್ಫ್ ಮಾಡಿದ ಅಶ್ಲೀಲ ಫೋಟೋ ರಚನೆ! IIIT ವಿದ್ಯಾರ್ಥಿ ಅರೆಸ್ಟ್​

ಕೃತಕ ಬುದ್ಧಿಮತ್ತೆ (AI) ಬಳಸಿ ಸಂಸ್ಥೆಯ ಸುಮಾರು 36 ವಿದ್ಯಾರ್ಥಿನಿಯರ ಮಾರ್ಫ್ ಮಾಡಿದ ಅಶ್ಲೀಲ ಫೋಟೋಗಳನ್ನು ರಚಿಸಿದ್ದಾನೆ ಎಂಬ ಆರೋಪದ ಮೇಲೆ ಛತ್ತೀಸ್‌ಗಢ ಪೊಲೀಸರು ನವ ರಾಯ್‌ಪುರದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ(IIIT) ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಐಐಐಟಿ ಆಡಳಿತ ಮಂಡಳಿಯಿಂದ ಲಿಖಿತ ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿ ಸೈಯದ್ ರಹೀಮ್ ಅದ್ನಾನ್ ಅಲಿ (20) ನನ್ನು ಬಂಧಿಸಲಾಗಿದೆ ಮತ್ತು ಔಪಚಾರಿಕ ತನಿಖೆ ಆರಂಭವಾಗಿದೆ" ಎಂದು ಹೆಚ್ಚುವರಿ ಎಸ್‌ಪಿ (ನವ ರಾಯ್‌ಪುರ) ವಿವೇಕ್ ಶುಕ್ಲಾ ಟಿಎನ್‌ಐಇಗೆ ತಿಳಿಸಿದ್ದಾರೆ.

ಆರೋಪಿ ವಿದ್ಯಾರ್ಥಿ ಎಲೆಕ್ಟ್ರಾನಿಕ್ ಮತ್ತು ಸಂವಹನ ಎಂಜಿನಿಯರಿಂಗ್ ಪದವಿಯ ಎರಡನೇ ವರ್ಷದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ ಫೋಟೋಗಳನ್ನು ಬಳಸಿಕೊಂಡು 36 ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರಗಳನ್ನು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ್ದ. ಈ ಎಲ್ಲಾ ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡಿದ್ದನು, ಅವುಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ವಿವೇಕ್ ಶುಕ್ಲಾ ತಿಳಿಸಿದರು.(ಏಜೆನ್ಸೀಸ್​)