ನ್ಯೂಸ್

VIDEO | ಈ ಟ್ರೋಫಿ ನನ್ನ ಜೀವನ; ಕ್ರಿಕೆಟ್​ ಫ್ಯಾನ್​ ಸುಧೀರ್ ಕುಮಾರ್ ಚೌಧರಿ ಹಿಂಗಂದಿದ್ಯಾಕೆ?

ಭಾರತ: ಕ್ರಿಕೆಟ್​ ವೀಕ್ಷಣೆ ಮಾಡುವ ಅನೇಕರಿಗೆ ಸುಧೀರ್​ ಕುಮಾರ್​ ಚೌಧರಿ ಯಾರು ಎಂಬುದು ತಿಳಿದಿರುತ್ತದೆ. ಭಾರತ ತಂಡ ಯಾವುದೇ ಪಂದ್ಯವನ್ನು, ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅಲ್ಲಿಗೆ ತೆರಳಿ ಟೀಂ ಇಂಡಿಯಾಗೆ ಅಭೂತಪೂರ್ವ ಬೆಂಬಲ ಕೊಡುವುದು ಸುಧೀರ್​ ಅವರ ಹವ್ಯಾಸವಾಗಿದೆ.  ವಿಶೇಷವಾಗಿ ಭಾರತದ ತ್ರಿವರ್ಣ ಧ್ವಜದ ಬಣ್ಣವನ್ನು ತಮ್ಮ ದೇಹಕ್ಕೆ ಲೇಪಿಸಿಕೊಂಡು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುತ್ತಾರೆ.

ಸಚಿನ್​ ತೆಂಡೂಲ್ಕರ್​ ಅವರ ವಿಶೇಷ ಅಭಿಮಾನಿಯಾದ ಸುಧೀರ್​, 2011ರ ಕ್ರಿಕೆಟ್​ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭಾರೀ ಪ್ರೋತ್ಸಾಹ ನೀಡಿದ್ದರು. ಅದರಂತೆಯೇ ಈ ಬಾರಿ ನಡೆಯುತ್ತಿರುವ 2023ರ ವಿಶ್ವಕಪ್​ನ ಭಾರತದ ಪಂದ್ಯಗಳಿಗೂ ಹಾಜರಾಗಲಿದ್ದಾರೆ. ವಿಶ್ವಕಪ್​ ಟ್ರೋಫಿ ತಮ್ಮ ತಲೆ ಮೇಲಿರುವ ಕಾರಣವನ್ನು ಇದೀಗ ಸುಧೀರ್​ ಸುದ್ದಿಗಾರರ ಮುಂದೆ ಹಂಚಿಕೊಂಡಿದ್ದಾರೆ.

"ಈ 'ಟ್ರೋಫಿ' ನನ್ನ ಜೀವನ. ನಾನು ಇದನ್ನು 2011 ರಲ್ಲಿ ನನ್ನ ತಲೆಯ ಮೇಲೆ ಧರಿಸಿದ್ದೆ, ಆಗ ನಾವು ವಿಶ್ವಕಪ್ ಗೆದ್ದಿದ್ದೇವೆ. ಈಗ 12 ವರ್ಷಗಳ ನಂತರ, ಮತ್ತೆ ಧರಿಸಿದ್ದೇನೆ. ಭಾರತವು 2023ರ ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಖಂಡಿತವಾಗಿ ಟ್ರೋಫಿ ಪಡೆಯುತ್ತೇವೆ" ಎಂದು ಸುಧೀರ್ ಹೇಳಿದರು,(ಏಜೆನ್ಸೀಸ್).

https://www.vijayavani.net/youtuber-ttf-vasan-driving-licence-suspended