ದಕ್ಷಿಣ ಆಫ್ರಿಕಾದಲ್ಲಿ ಜರುಗಿದ ಕಾಮನವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ಪೂಜಾ ಶಹಾಪುರಕರ ಅವರನ್ನು ಭಾನುವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಕಲ್ಲಪ್ಪ ಶಹಾಪುರಕರ, ಸಂತೋಷ ಪಾಟೀಲ, ಭರತ ಪಾಟೀಲ ಇತರರಿದ್ದರು. 
ನ್ಯೂಸ್

ಪೂಜಾ ಶಹಾಪುರಕರಗೆ ಅದ್ದೂರಿ ಸ್ವಾಗತ

ಬೆಳಗಾವಿ: ದಕ್ಷಿಣ ಆಫ್ರಿಕಾದ ಪೋರ್ಟ್ ಎಲಿಜಿಬೆತ್‌ನಲ್ಲಿ ಆ. 2ರಿಂದ 7ರ ವರೆಗೆ ಜರುಗಿದ ಕಾಮನವೆಲ್ತ್
ಗೇಮ್ಸ್‌ನ ಜೂಡೋ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದಲ್ಲಿ ಭಾರತ ಪ್ರತಿನಿಧಿಸಿರುವ ಬೆಳಗಾವಿ ಹೊಸೂರು ಬಸವ ನಗಲ್ಲಿಯ ಪೂಜಾ ಶಹಾಪುರಕರ ಚಿನ್ನದ ಪದಕ ಪಡೆದಿದ್ದಾರೆ.

ಭಾನುವಾರ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪೂಜಾ ಪ್ರಕಾಶ ಶಹಾಪುರಕರ ಅವರನ್ನು ಹೊಸೂರು ಬಸವನ ಗಲ್ಲಿ ನಿವಾಸಿಗಳು ಸ್ವಾಗತಿಸಿದರು. ಬಳಿಕ ಹೊಸೂರು ಬಸವನ ಗಲ್ಲಿಯಿಂದ ಮರಾಠ ಮಂಗಲ ಕಾರ್ಯಾಲಯದವರೆಗೆ ತೆರೆದ ವಾಹನದಲ್ಲಿ ಕರೆದೊಯ್ದು ಸತ್ಕರಿಸಲಾಯಿತು. ಕಲ್ಲಪ್ಪ ಶಹಾಪುರಕರ, ಸಂತೋಷ ಪಾಟೀಲ, ಭರತ ಪಾಟೀಲ, ರವಿ ಬೋಸ್ಲೆ, ಮಾರುತಿ ದೋಳೆಕರ ಇತರರಿದ್ದರು.