ಚಿದರಹಳ್ಳಿ ಗವಿಮಠ ಬೊಮ್ಮನಹಳ್ಳಿ ಗ್ರಾಮದ ಸಿದ್ದರಳ್ಳಿ ಪಾರಮಾರ್ಥಿಕ ಗವಿಮಠದಲ್ಲಿ ವಿಶೇಷ ಪೂಜೆ ನೆರವೇರಿತು. 
ನ್ಯೂಸ್

ಪಾರಮಾರ್ಥಿಕ ಗವಿಮಠದಲ್ಲಿ ಪೂಜಾ ಕೈಂಕರ್ಯ

ತಿ.ನರಸೀಪುರ: ತಾಲೂಕಿನ ಚಿದರಹಳ್ಳಿ-ಬೊಮ್ಮನಹಳ್ಳಿ ಗ್ರಾಮದ ಸಿದ್ದರಹಳ್ಳಿ ಪಾರಮಾರ್ಥಿಕ ಗವಿಮಠದಲ್ಲಿ ದೀಪಾವಳಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.

ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್ ಮಾತನಾಡಿ, ಧಾರ್ಮಿಕ ಕ್ಷೇತ್ರಕ್ಕೆ ಮಠಗಳ ಮಠಮಾನ್ಯಗಳ ಕೊಡುಗೆ ಅಪಾರ. ಗ್ರಾಮಗಳು ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವಲ್ಲಿ ಮಠಾಧೀಶರ ಪಾತ್ರ ಮುಖ್ಯವಾದುದು ಎಂದರು.

ಪಾರಮಾರ್ಥಿಕ ಗವಿಮಠದ ಮಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಷಡಕ್ಷರ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಿತು.

ಮುಡುಕನಪುರದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಎಂ. ಎಲ್.ಹುಂಡಿಯ ಗೌರಿಶಂಕರ ಸ್ವಾಮೀಜಿ, ಹಣಕೊಳದ ಚಿದಾನಂದ ಸ್ವಾಮೀಜಿ, ಕಳ್ಳಿಪುರದ ಗುರುಪಾದ ಸ್ವಾಮೀಜಿ, ಸೇತುವೆಮಠದ ಸಹಜಾನಂದ ಸ್ವಾಮೀಜಿ, ತೋಪಿನಮಠದ ಇಮ್ಮಡಿ ಬಸವ ಸ್ವಾಮೀಜಿ, ದ್ಯಾವಪಟ್ಟಣದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಾವೇರಿಪುರ ಬೆನಕನಹಳ್ಳಿ ಮಠದ ಶ್ರೀಗಳು, ನವೀನ ಸಿದ್ದಪ್ಪ ಷಣ್ಮುಖ ಸ್ವಾಮಿ, ರಾಬೇಂದ್ರಪ್ಪ, ಶಿವಪ್ಪ, ಶಿವಲಿಂಗಪ್ಪ, ಮಹೇಶ, ಮಂಜು, ಪ್ರಸಾದಮೂರ್ತಿ, ರೇಣಪ್ಪ, ಸುಜಾತಾ ಪ್ರಕಾಶ್ ಮತ್ತಿತರರು ಇದ್ದರು.