ಬೆಂಗಳೂರು: ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಉಪನ್ಯಾಸಕರು 21 ಗಂಟೆ, ವಿಭಾಗಾಧಿಕಾರಿಗಳು 16 ಗಂಟೆ ಮತ್ತು ಪ್ರಾಂಶುಪಾಲರು 6 ಗಂಟೆಗಳ ಕನಿಷ್ಠ ಶೈಕ್ಷಣಿಕ ಕಾರ್ಯಭಾರವನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಭಾರವನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಪ್ರಾಂಶುಪಾಲರು ವಹಿಸಬೇಕಾದ ಕ್ರಮಗಳನ್ನು ಇಲಾಖೆಯು ಪ್ರಕಟಿಸಿದೆ.
ವಿಜ್ಞಾನ ವಿಷಯದ ಉಪನ್ಯಾಸಕರು ಇಂಜಿನಿಯರಿಂಗ್ ಮ್ಯಾಥ್ಸ್-1 ಮತ್ತು 2ರ ವಿಷಯಗಳನ್ನು, ಇಂಗ್ಲಿಷ್ ಉಪನ್ಯಾಸಕರು ಎಸ್ಸೆನ್ಸಿಯಲ್ ಇಂಗ್ಲಿಷ್ ಕಮ್ಯುನಿಕೇಷನ್ ವಿಷಯಗಳನ್ನು ಬೋಧಿಸಬೇಕು. ಒಂದು ವೇಳೆ ಇಂಗ್ಲಿಷ್ ಉಪನ್ಯಾಸಕರು ಲಭ್ಯವಿಲ್ಲದಿದ್ದಲ್ಲಿ ಸಂಸ್ತೆಯಲ್ಲಿನ ಕಾರ್ಯಭಾರ ಕೊರತೆ ಇರುವ ಉಪನ್ಯಾಸಕರಿಗೆ ಈ ಕಾರ್ಯಭಾರವನ್ನು ಹಂಚುವಂತೆ ಸೂಚಿಸಲಾಗಿದೆ.
ಎಲೆಕ್ಟ್ರಿಕಲ್ ಉಪನ್ಯಾಸಕರು ಂಡಮೆಂಟಲ್ಸ್ ಆ್ ಎಲೆಕ್ಟ್ರಿಕಲ್ ಆೃಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯವನ್ನು ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಹಾಗೆಯೇ ಕಂಪ್ಯೂಟರ್ ಸೈನ್ಸ್, ಪ್ರಾಜೆಕ್ಟ್ ವರ್ಕ್/ಇಂಟರ್ನ್‌ಶಿಪ್ ವಿಷಯದ ಕಾರ್ಯಭಾರವನ್ನು ವಿಭಾಗದಲ್ಲಿನ ಎಲ್ಲ ಉಪನ್ಯಾಸಕರು ಸಮವಾಗಿ ವಾರಕ್ಕೆ 6 ಗಂಟೆಯಂತೆ ಕಾರ್ಯಭಾರ ಹಂಚಿಕೊಳ್ಳುವಂತೆ ಸೂಚಿಸಿ ಉನ್ನತ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.