ಮೃತ್ಯುಂಜಯ ಕಪಗಲ್ ಬೆಂಗಳೂರು
ಫೇಸ್ಬುಕ್ನ ಒಂದು ಪೋಸ್ಟ್ ಮೂಲಕ ಹೊತ್ತಿಕೊಂಡ ಕಿಡಿಯೊಂದು ಬೆಂಗಳೂರಿನ ಮೂರು ಪ್ರದೇಶಗಳಲ್ಲಿ ಹಿಂಸೆಯ ದಳ್ಳುರಿ ಹೊತ್ತಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವೀಗ, ಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ನಿಗಾ ಬಿಗಿಗೊಳಿಸಲು ಮುಂದಾಗಿದೆ. ಆ ಮೂಲಕ ಪ್ರಚೋದನಾತ್ಮಕ ಟೀಕೆ, ಟಿಪ್ಪಣಿಗಳನ್ನು ಮಾಡಿ ಅಶಾಂತಿ ಸೃಷ್ಟಿಸುವವರ ಹೆಡೆಮುರಿ ಕಟ್ಟಲು ಯೋಚಿಸಿದೆ.
ಗಲಭೆಗ್ರಸ್ತ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಕಾವಲ್ ಬೈರಸಂದ್ರ ಸಹಜ ಸ್ಥಿತಿ ಮರಳಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ವಿಷಕಾರಿ ಪೋಸ್ಟ್ಗಳ ಹರಿದಾಟ ನಿಂತಿಲ್ಲ. ದುಷ್ಕರ್ವಿುಗಳನ್ನು ಪತ್ತೆ ಹಚ್ಚುವುದರ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸರಿಗೆ ಇದು ತಲೆ ನೋವು ತರಿಸಿದೆ.
ಮಾರಕ ಪೋಸ್ಟ್ಗಳಿಗೆ ತಡೆ: ಫೇಸ್ಬುಕ್, ಇನ್ಸ್ಟ್ಟಾಗ್ರಾಮ್ ಟ್ವಿಟರ್, ವಾಟ್ಸ್ಆಪ್ ಮುಂತಾದ ಸೋಷಿಯಲ್ ಮೀಡಿಯಾಗಳು ಸೃಷ್ಟಿಸುತ್ತಿರುವ ತಲ್ಲಣಗಳು ಸರ್ಕಾರವನ್ನು ಬಡಿದೆಬ್ಬಿಸಿವೆ. ಜಾಲತಾಣಗಳನ್ನು ನಿಯಂತ್ರಿ ಸಲು ಸರ್ಕಾರ ಯೋಚಿಸಿಲ್ಲ. ಸದ್ಯಕ್ಕೆ ಅಂತಹ ಯಾವುದೇ ಕಾಯ್ದೆ-ಕಟ್ಟಳೆಗಳೂ ಇಲ್ಲ. ಹೀಗಾಗಿ ಮಾರಕ ಪೋಸ್ಟ್ಗಳ ಹಂಚಿಕೆಗೆ ಮೂಗುದಾರ ಬಿಗಿಯಬೇಕೆಂಬ ಚಿಂತನೆ ನಡೆಸಿದೆ. ಸೋಷಿಯಲ್ ಮೀಡಿಯಾಗಳ ಮುಖ್ಯಸ್ಥರೊಂದಿಗೆ ರ್ಚಚಿಸಲು ಮುಂದಿನ ವಾರ ಸಭೆ ಕರೆದಿದ್ದು, ಅದೇ ಕಾಲಕ್ಕೆ ಸೈಬರ್ ಕ್ರೖೆಮ್ ಹಾಗೂ ತಾಂತ್ರಿಕ ವಿಭಾಗದವರೊಂದಿಗೆ ವಿಚಾರ ವಿನಿಮಯ ನಡೆಸಿ ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದೆ.
ಸರ್ಕಾರದ ಸಾಧ್ಯತೆಗಳು
ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್ಗಳನ್ನು ಹಂಚುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ಕಂಪನಿಗಳೊಂದಿಗೆ ರ್ಚಚಿಸಲು ಮುಂದಿನ ವಾರ ಸಭೆ ಕರೆಯಲು ತೀರ್ವನಿಸಿರುವೆ. | ಬಸವರಾಜ ಬೊಮ್ಮಾಯಿ ಗೃಹ ಸಚಿವ. https://www.vijayavani.net/over-18-lakh-people-recovered-from-virus-covid19/