ನ್ಯೂಸ್

ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ನೂತನ ಎಸ್ಪಿ

ಹರ್ಷ ನ.ಪುರೋಹಿತ

ಐಮಂಗಲ: ಐಮಂಗಲ ಪೊಲೀಸ್ ತರಬೇತಿ ಶಾಲೆಯ ಎಸ್‌ಪಿ ಹಾಗೂ ಪ್ರಾಚಾರ್ಯರಾಗಿ ಎನ್.ಶ್ರೀನಿವಾಸ್ ಬುಧವಾರ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿ, ಈ ಹಿಂದೆ ಕಡೂರು ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದು, ವೀರಪ್ಪನ್ ಕಾರ್ಯಾಚರಣೆ ಪಡೆ ಹಾಗೂ ಡಿಎಆರ್ ಚಿತ್ರದುರ್ಗ, ಶಿವಮೊಗ್ಗದಲ್ಲಿ ಡಿವೈಎಸ್‌ಪಿ ಆಗಿ ಕೆಲಸ ಮಾಡಿದ್ದೇನೆ. 2020 ರಲ್ಲಿ ರಾಷ್ಟ್ರಪತಿ ಪದಕ ದೊರೆತಿದೆ ಎಂದರು.

ಈ ತರಬೇತಿ ಶಾಲೆ ಇಲ್ಲಿಯವರೆಗೂ ಸಾವಿರಾರು ಪ್ರಶಿಕ್ಷಣಾರ್ಥಿಗಳಿಗೆ ಬುನಾದಿ ಹಾಗೂ ಪುನರ್ಮನನ ತರಬೇತಿ ನೀಡಿದ ಹೆಗ್ಗಳಿಕೆ ಇದೆ. ಈ ಹಿಂದೆ ಇದ್ದ ಪ್ರಾಚಾರ್ಯರು ತರಬೇತಿ ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ತರಬೇತಿ ಶಾಲೆಯನ್ನು ಇನ್ನು ಹೆಚ್ಚಿನದಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರ್‌ಪಿಐ ಆನಂದ್ ಬೂದಿಗೊಪ್ಪ ನೇತೃತ್ವದಲ್ಲಿ ಎಡಿಎಗಳಾದ ಮಹಾಲಿಂಗಪ್ಪ, ಅವಿನಾಶ್, ಆನಂದ್, ತಿಮ್ಮಣ್ಣ, ರಜಾಕ್, ಧನಂಜಯ, ಸಿದ್ದೇಶ್, ಪ್ರಸನ್ನ, ಸಂತೋಷ್ ಗೌರವವಂದನೆ ಸಲ್ಲಿಸಿದರು.

ಈ ವೇಳೆ ಡಿವೈಎಸ್‌ಪಿ ಬಿ.ಪರಶುರಾಮ್, ಸಿಪಿಐಗಳಾದ ಬಿ.ಜಿ.ಶಂಕರಪ್ಪ, ಕೃಷ್ಣನಾಯ್ಕ, ಪಿಎಸ್‌ಐ ಮೇಘಾ, ಆರ್‌ಎಸ್‌ಐಗಳಾದ ಕೆ.ಆರ್.ಮಂಜುನಾಥ್, ಮಂಜುನಾಥ್ ಬಿದರಿಕೊಪ್ಪ, ಕಚೇರಿ ಅಧೀಕ್ಷಕಿ ಪಿ.ಪುಷ್ಪ, ಸಹಾಯಕ ಆಡಳಿತಾಧಿಕಾರಿ ಬಿ.ಎಸ್.ನಾಗರಾಜ್, ಎಆರ್‌ಎಸ್‌ಐ ರಾಜಣ್ಣ, ಸುದರ್ಶನ್, ಶ್ರೀಧರ್, ಎಡಿಎಗಳಾದ ರಾಮಪ್ಪ, ನಾಗರಾಜು, ಹುಸೇನ್, ಚಂದ್ರಶೇಖರ್, ರವಿಚಂದ್ರ, ಸೆಲ್ವಕುಮಾರ್, ಬೋಜ್‌ಕುಮಾರ್ ಇದ್ದರು.