ಆರೋಪಿ 
ನ್ಯೂಸ್

ಬೆಳಗ್ಗೆ ಕಳವಾಗಿದ್ದ ಮಗು ಸಂಜೆಯಷ್ಟರಲ್ಲಿ ಪತ್ತೆ, ಕದ್ದು ಪರಾರಿ ಆಗಿದ್ದಾಕೆಯ ಬಂಧನ..

ಬೆಳಗಾವಿ: ಬೆಳಗ್ಗೆಯಷ್ಟೇ ಮಗುವನ್ನು ಕದ್ದುಕೊಂಡು ಪರಾರಿಯಾಗಿದ್ದವಳು ಸಂಜೆಯಾಗುವಷ್ಟರಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಆಸ್ಪತ್ರೆಯಿಂದಲೇ ಮಗುವನ್ನು ಕಳವು ಮಾಡಿ ಪರಾರಿಯಾಗಿದ್ದ ಈಕೆಯನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಿಂದ ಮಗುವನ್ನು ಕಳವು ಮಾಡಲಾಗಿತ್ತು. ಈ ಮಗುವನ್ನು ಕದ್ದ ಮಹಾರಾಷ್ಟ್ರದ ಮಹಿಶಾಳ ಗ್ರಾಮದನೀಲಾಬಾಯಿ ಕಾಂಬ್ಳೆ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಆಸ್ಪತ್ರೆಗೆ ಬಂದಿದ್ದ ಈಕೆ ಮಗುವನ್ನು ತೂಕ ಮಾಡಿಸಿಕೊಂಡು ಬರುವ ನೆಪದಲ್ಲಿ ಎತ್ತಿಕೊಂಡು ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದಳು. ಈ ಕುರಿತು ಅಥಣಿ ಪೊಲೀಸರಿಗೆ ದೂರು ನೀಡಲಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಅದಾಗಲೇ ಮಹಾರಾಷ್ಟ್ರದ ಮಹಿಶಾಳಕ್ಕೆ ತೆರಳಿದ್ದ ನೀಲಾಬಾಯಿಯನ್ನು ಪತ್ತೆ ಹಚ್ಚಿ ಬಂಧಿಸಿಕೊಂಡು ಬಂದಿದ್ದಾರೆ. ಕೆಲವೇ ಗಂಟೆಗಳಲ್ಲಿ ಮಗುವನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.