ನ್ಯೂಸ್

8 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ಶಾಲೆಗೆ ಹೋಗುತ್ತಿದ್ದ ಎಂಟು ವರ್ಷದ ಬಾಲಕಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಈಜೀಪುರ ಮುಖ್ಯರಸ್ತೆಯ ಮೆಕ್ಯಾನಿಕ್ ಶಾಪ್​ ಒಂದರಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ‌ 8.15ರ ಸುಮಾರಿಗೆ ಈ ಘಟನೆ ನಡೆದ್ದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೈಕ್‌ ಮೆಕ್ಯಾನಿಕ್‌ ಶಾಪ್​ನಲ್ಲಿ ಕೆಲಸ‌ ಮಾಡುತ್ತಿದ್ದಾತ, ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಶಾಪ್ ಒಳಗೆ ಎಳೆಯೊಯ್ದು ಲೈಂಗಿಕ ದೌರ್ಜನ್ಯ ಕೃತ್ಯ ಎಸಗಿದ್ದಾನೆ. ಮೆಕ್ಯಾನಿಕ್‌ ಶಾಪ್‌ನಿಂದ ಅಳುತ್ತಾ ಓಡಿ ಬಂದ ಬಾಲಕಿ, ನಡೆದ‌ ಘಟನೆಯನ್ನ ತಾಯಿಯ ಮುಂದೆ‌ ವಿವರಿಸಿದ್ದಾಳೆ.

ಬಾಲಕಿ ನೀಡಿದ ಮಾಹಿತಿ ಮೇರೆಗೆ ತಾಯಿ ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.