ನ್ಯೂಸ್

ಎಲ್ಲ ಸಮಸ್ಯೆಗಳನ್ನು ಪ್ರೀತಿಯಿಂದ ಗೆಲ್ಲಬೇಕು; ಬಸವಶಾಂತಲಿಂಗ ಸ್ವಾಮೀಜಿ

ಹಾವೇರಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕವೇ ಕಾಗಿರ್ಲ್​ ವಿಜಯೋತ್ಸವ ಆಚರಿಸಬೇಕು. ಯುದ್ಧ ಗೆಲುವು ಮಾತ್ರವಲ್ಲ ಸಾವಿನ ಮಾರಣ ಹೋಮವೂ ಆಗಿರುತ್ತದೆ. ಕಾಗಿರ್ಲ್​ ಹೋರಾಟದಲ್ಲಿ ನೂರಾರು ಸೈನಿಕರು ಹುತಾತ್ಮರಾಗಿದ್ದಾರೆ. ಇಂದು ನಾವು ಎಲ್ಲ ಸಮಸ್ಯೆಗಳನ್ನು ಮನುಷ್ಯ ಪ್ರೀತಿಯಿಂದಲೇ ಗೆಲ್ಲುವಂತಾಗಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಪೊಲೀಸ್​ ಅಧೀಕರ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾಗಿರ್ಲ್​ ವಿಜಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿರು.
ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ. ಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕಾಗಿರ್ಲ್​ ಯೋಧ ಮಹ್ಮದ್​ ಜಹಾಂಗೀರ ಖವಾಸ್​ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಪಿ.ಸಿ. ಹಿರೇಮಠ, ಕಚೇರಿ ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ ಹಾಗೂ ಸಿಬ್ಬಂದಿ ಇದ್ದರು.