ನ್ಯೂಸ್

ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಅಲ್ಲ, ಪೊಲೀಸರು ಸಹ ರಿಕವರಿ ಏಜೆಂಟರಲ್ಲ;ಪೊಲೀಸ್ ಆಯುಕ್ತ ಬಿ. ದಯಾನಂದ್

ಬೆಂಗಳೂರು: ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಅಲ್ಲ, ಪೊಲೀಸರು ಸಹ ರಿಕವರಿ ಏಜೆಂಟರಲ್ಲ. ಸಿವಿಲ್ ವ್ಯಾಜ್ಯಗಳನ್ನು ಬಗೆಹರಿಸಿಕೊಡುವಂತೆ ಪೊಲೀಸರ ಬಳಿಗೆ ಹೋಗಬೇಡಿ ಎಂದು ಸಾರ್ವಜನಿಕರಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಲಹೆ ನೀಡಿದರು.

ಕೆ.ಜಿ. ರಸ್ತೆಯಲ್ಲಿರುವ ಎ್ಕೆಸಿಸಿಐ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಎ್ಕೆಸಿಸಿಐ ಸದಸ್ಯರು ‘ಪೊಲೀಸ್ ಠಾಣೆಗಳು ಸಿವಿಲ್ ವ್ಯಾಜ್ಯ ಇತ್ಯರ್ಥಗಳ ಕೇಂದ್ರಗಳಾಗಿವೆ’ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ದಯಾನಂದ್, ಸಿವಿಲ್ವ್ಯಾಜ್ಯಗಳ ಸಂಬಂಧ ದೂರು ಪಡೆಯದಂತೆ ಈಗಾಗಲೆ ಸರ್ಕಾರ ಸೂಚನೆ ನೀಡಿದೆ. ಠಾಣೆಗಳಲ್ಲಿ ಸ್ವೀಕರಿಸಬೇಕಾದ ದೂರುಗಳ ಸಂಬಂಧ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಸಹ ಹೊರಡಿಸಲಾಗಿದೆ. ಆದರೂ ಕೆಲವೊಂದು ಪ್ರಕರಣಗಳು ಗಮನಕ್ಕೆ ಬರುತ್ತಿವೆ. 

ಇದರಲ್ಲಿ ಸಾರ್ವಜನಿಕರ ಕಡೆಯಿಂದಲೂ ತಪ್ಪುಗಳು ನಡೆಯುತ್ತಿವೆ. ಸಿವಿಲ್ ವ್ಯಾಜ್ಯಗಳನ್ನು ಠಾಣೆವರೆಗೂ ತೆಗೆದುಕೊಂಡು ಹೋಗಿ ಇತ್ಯರ್ಥ ಮಾಡಿಕೊಡುವಂತೆ ದೂರುಗಳನ್ನು ಕೊಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಲಿ, ಪೊಲೀಸರು ರಿಕವರಿ ಏಜೆಂಟರಾಗಲಿ ಅಲ್ಲ. ವಂಚನೆ, ಸುಲಿಗೆ ಆಗಿದ್ದರೆ ಎ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ದೂರು ಕೊಡಿ. ಬದಲಿಗೆ ಹಣ ರಿಕವರಿ ಮಾಡಿಕೊಡಿ ಎಂದು ದೂರು ಕೊಡಬೇಡಿ. ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಭಾಗಿಯಾಗಿದ್ದರೆ ಅಂಥವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಿ. ದಯಾನಂದ್ ಎಚ್ಚರಿಕೆ ನೀಡಿದರು.

ಉದ್ಯಮಿಗಳಿಗೆ ದೊಡ್ಡ ತಲೆನೋವಾಗಿರುವ ಸೈಬರ್ ಕ್ರೈಂ ಅಪರಾಧ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ. ಸ್ೇಸಿಟಿ ಯೋಜನೆ ಅನುಷ್ಠಾನ ವಿಚಾರವಾಗಿ ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರ ಪ್ರಥಮವಾಗಿದೆ. ಈಗಾಗಲೆ ಮೊದಲ ಹಂತವಾಗಿ 4 ಸಾವಿರ ಕ್ಯಾಮರಾ ಅಳವಡಿಸಲಾಗಿದೆ. 2ನೇ ಹಂತದಲ್ಲಿ 3,500 ಕ್ಯಾಮರಾ ಅಳವಡಿಕೆ ನಡೆಯುತ್ತಿದೆ.

ಜತೆಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮುಖಚಹರೆ ಪತ್ತೆ ಕ್ಯಾಮರಾ, ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆ ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಮಾಂಡ್ ಸೆಂಟರ್ ನಿರ್ಮಿಸಲಾಗಿದೆ. ಯಾವುದೇ ಅಪರಾಧ ನಡೆದರೂ ಸಿಸಿ ಕ್ಯಾಮರಾ ಸಹಾಯ ಪ್ರಮುಖವಾಗಿದೆ ಎಂದು ಮಾಹಿತಿ ನೀಡಿದರು.
ಎ್ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಪದಾಧಿಕಾರಿಗಳಾದ ಪಿ.ಎಚ್.ರಾಜ್ ಪುರೋಹಿತ್, ರಮೇಶ್ ಚಂದ್ರ ಲಹೋಟಿ, ಎಂ.ಜಿ.ಬಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.