ಕೋಲಾರ: ಶ್ರೀರಾಮಸೇನೆಯ ಸಂಸ್ಥಾಪಕ ಕೋಲಾರದಲ್ಲಿನ ಶೋಭಾಯಾತ್ರೆಗಾಗಿ ದಿಢೀರ್ ಪ್ರತ್ಯಕ್ಷವಾಗಿದ್ದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಅವರನ್ನು ವಾಪಸ್ ಕಳುಹಿಸಬೇಕು ಎಂದು ಆಯೋಜಕರಿಗೆ ಸೂಚನೆ ನೀಡಿದ ಪ್ರಸಂಗ ನಡೆದಿದೆ.
ಪ್ರಮೋದ್ ಮುತಾಲಿಕ್ ಪ್ರತ್ಯಕ್ಷವಾಗುತ್ತಿದ್ದಂತೆ ಪೊಲೀಸರು ಗರಂ ಆಗಿದ್ದು, ಶ್ರೀರಾಮಸೇನೆಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ಪೊಲೀಸರು ಮುತಾಲಿಕ್ ಅವರನ್ನು ಸುತ್ತುವರಿದಿದ್ದು, 20 ನಿಮಿಷಗಳಲ್ಲಿ ಅವರನ್ನು ಹೊರ ಕಳುಹಿಸಬೇಕು ಎಂದು ಆಯೋಜಕರಿಗೆ ಎಸ್ಪಿ ದೇವರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅನುಮತಿ ಇಲ್ಲದೆ ಮುತಾಲಿಕ್ ಕೋಲಾರಕ್ಕೆ ಆಗಮಿಸಿದ್ದಾರೆ ಎಂದು ಪೊಲೀಸರು ಶೋಭಾಯಾತ್ರೆಗೆ ತಡೆಯೊಡ್ಡಿದ್ದಾರೆ.
ಅಲ್ಲದೆ ಪೂಜೆ ಮಾಡಿ ಎಲ್ಲರೂ ವಾಪಸ್ ತೆರಳಬೇಕು ಎಂದು ಎಸ್ಪಿ ಆದೇಶ ಮಾಡಿದ್ದರು. ಪರಿಣಾಮವಾಗಿ ಕೋಲಾರ ಎಂ.ಜಿ. ರಸ್ತೆಯಲ್ಲಿನ ಛತ್ರಪತಿ ಶಿವಾಜಿಗೆ ಹಾರ ಹಾಕಿ, ಕೇಸರಿ ಬಾವುಟ ಹಾರಿಸಿದ ಪ್ರಮೋದ್ ಮುತಾಲಿಕ್, ಕೇವಲ ಧ್ವಜಾರೋಹಣ ಮಾಡಿ ಅಲ್ಲಿಂದ ವಾಪಸ್ ಹೋದರು.