ನ್ಯೂಸ್

ರಾಜ್ಯೋತ್ಸವ ಆಚರಣೆಯ ನೆಪದಲ್ಲಿ ಕುಣಿದು ಕುಪ್ಪಳಿಸುತ್ತಿದ್ದವರು ನಂತರ ದಿಕ್ಕಾಪಾಲಾಗಿ ಓಡಿದರು...!

ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಕುಣಿದು ಕುಪ್ಪಳಿಸಿದ ಯುವಕರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್​ ನಡೆಸಿದ್ದಾರೆ.

ನಗರದ ಚೆನ್ನಮ್ಮ ವೃತ್ತದಲ್ಲಿ ಘಟನೆ ನಡೆದಿದೆ. ರಾಜ್ಯೋತ್ಸವ ಆಚರಣೆ ಮಾಡುವುದು ಬಿಟ್ಟು ಮನಸಿಗೆ ಬಂದಂತೆ ಕುಣಿದು, ಇನ್ನೊಬ್ಬರಿಗೆ ತೊಂದರೆ ಕೊಡುತ್ತಿದ್ದರು. ಗುಂಪಾಗಿ ಸೇರಿದ್ದರು. ಎಷ್ಟೇ ಹೇಳಿದರೂ ಯುವಕರು ಕೇಳಿಸಿಕೊಳ್ಳದಾಗ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಅದಾದ ಬಳಿಕ ಯುವಕರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ.