ಶಿವಮೊಗ್ಗದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ತಡರಾತ್ರಿ ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸರು. 
ನ್ಯೂಸ್

ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ವೇಳೆ ಲಾಠಿ ಬೀಸಿದ ಪೊಲೀಸರು

ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆ ಯುವಕರು ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ನಡೆಸಿದರು. ನಗರದ ವಿವಿಧೆಡೆ ರಸ್ತೆಗಿಳಿದ ಆರ್‌ಸಿಬಿ ಅಭಿಮಾನಿಗಳು ಬೈಕ್ ರ‌್ಯಾಲಿ ನಡೆಸಿದರು. ವಿವಿಧೆಡೆ ದಿಢೀರ್ ರಸ್ತೆಗಿಳಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇದೇ ವೇಳೆ ನಗರದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ತಡರಾತ್ರಿ 1.30ವರೆಗೂ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಮ್ಯೂಸಿಕ್ ಇಲ್ಲದಿದ್ದರೂ ಹಾಡಿ ಕುಣಿಯುತ್ತಿದ್ದರು. ತಡರಾತ್ರಿ ಆಗಿದ್ದರಿಂದ ಪೊಲೀಸರು ಅಭಿಮಾನಿಗಳಿಗೆ ಮನೆಗೆ ಹೋಗಿ ಎಂಬ ಸಂದೇಶ ರವಾನೆ ಮಾಡಿದರು. ಆದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಬೀಸಿದರು. ಏಟು ಬೀಳುತ್ತಿದ್ದಂತೆ ಅಭಿಮಾನಿಗಳು ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಕೆಲವರು ಗಾಯಗೊಂಡರು.