ನ್ಯೂಸ್

ಅಮೂಲ್ಯಾ, ಆರುದ್ರಾರನ್ನು ನೋಡಲು ಜೈಲಿಗೆ ಬಂದ ಅವರ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅವರು ಹೇಳಿದ್ದು ಹೀಗೆ...

ಬೆಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿದ ಮತ್ತು ಫ್ರೀ ಕಾಶ್ಮೀರ ಪ್ಲಕಾರ್ಡ್​ ಹಿಡಿದ ಅಮೂಲ್ಯಾ ಮತ್ತು ಆರುದ್ರಾರನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಅಮೂಲ್ಯಾ ಹಾಗೂ ಆರುದ್ರಾ ಬಂಧನದ ವೇಳೆ ಠಾಣೆಯ ಬಳಿ ಬಂದಿದ್ದ ಅವರ ಇಬ್ಬರು ಸ್ನೇಹಿತರನ್ನು ಪೊಲೀಸ್​ ವಿಶೇಷ ತಂಡ ವಿಚಾರಣೆಗೆ ಒಳಪಡಿಸಿದೆ.

ಅಮೂಲ್ಯಾ ಹಾಗೂ ಆರುದ್ರಾ ಎಲ್ಲೆಲ್ಲಿ ಇಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಸ್ಟೇಶನ್ ಬಳಿ ಬಂದ ಪರನ್​ ಅಮಿತವ್​ ಮತ್ತು ನಜೀಬುಲ್ಲ ಬಳಿ ಪೊಲೀಸರು ಕೇಳಿದ್ದಾರೆ ಎನ್ನಲಾಗಿದೆ.

ಅದಕ್ಕೆ ಉತ್ತರಿಸಿದ ಇವರಿಬ್ಬರೂ, ಅಮೂಲ್ಯ ಮತ್ತು ಆರುದ್ರಾ ಬಂಧನವಾಗಿದ್ದು ತಿಳಿಯಿತು. ಅದಕ್ಕಾಗಿ ಠಾಣೆಗೆ ಬಂದಿದ್ದೇವೆ. ಅವರ ಹೋರಾಟ ಮತ್ತು ಹೇಳಿಕೆ ಬಗ್ಗೆ ನಮಗೆ ಗೊತ್ತಿಲ್ಲ. ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ನಾವು ಅವರ ಸ್ನೇಹಿತರು. ಹಾಗಾಗಿ ಬಂದಿದ್ದೇವೆ. ನಾವಿಬ್ಬರು ಯಾವುದೇ ಹೋರಾಟದಲ್ಲೂ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)