ತಿರುವನಂತಪುರಂ: ನಾಟಕೀಯ ಬೆಳವಣಿಗೆಯೊಂದರಲ್ಲಿ ಅಂತರ್ಧರ್ಮೀಯ ಜೋಡಿಯೊಮದು ವಿವಾಹವಾಗುವುದಕ್ಕು ಮುನ್ನ ಪೊಲೀಸರು ವಧುವನ್ನು ಎಳೆದೊಯ್ದುದಿರುವ ಘಟನೆ ತಿರುವನಂತಪುರದ ಕೋವಳಂ ದೇವಾಲಯದಲ್ಲಿ ನಡೆದಿದೆ.
ಘಟನೆ ಜೂನ್ 18, ಭಾನುವಾರದಂದು ನಡೆದಿ್ದು, ಪರಸ್ಪರ ಪ್ರೀತಿಸುತ್ತಿದ್ದ ಆಲ್ಫಿಯಾ ಮತ್ತು ಅಖಿಲ್ ಮದುವೆಯಾಗಲು ಕೋವಳಂ ದೇವಾಲಯಕ್ಕೆ ತೆರಳಿದ್ದರು. ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಪೊಲೀಸರು ಆಲ್ಫಿಯಾಳನ್ನು ವಶಕ್ಕೆ ಪಡೆದು ನ್ಯಾಯಾಲದಲ್ಲಿ ಹಾಜರುಪಡಿಸಿದ್ಧಾರೆ.
ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಅಧಿಕಾರಿಗಳು ಆಲ್ಫಿಯಾ ಕಾಣೆಯಾಗಿದ್ದರಿಂದ ಆಕೆಯ ಪೋಷಕರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ನಾವು ಆಕೆಯನ್ನು ಕರೆದೊಯ್ದು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದೇವೆ ಎಂದು ತಿಳಿಸಿದ್ಧಾರೆ.
ಇನ್ನು ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವರ ಅಖಿಲ್ ಹಾಗು ವಧು ಆಲ್ಫಿಯಾ ಪೊಲೀಸರು ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಮಾಡಲಾಗಿದೆ. ಪೊಲೀಸರ ನಡುವಳಿಕೆ ಕುರಿತಾಗಿ ಹಿರಿಯ ಅಧಿಕಾರಿಗಳಿಗೆ ದೂರಿ ಕೊಡಲಾಗುವುದು ಎಂದು ಜೋಡಿಗಳಿಬ್ಬರು ತಿಳಿಸಿದ್ದಾರೆ.