ನ್ಯೂಸ್

ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಬೆಂಗಳೂರು ಪೊಲೀಸ್ ಕಾನ್ಸ್‌ಟೇಬಲ್ ಆಯ್ಕೆ

ಬೆಂಗಳೂರು: ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ನಗರ ಪೊಲೀಸ್ ಕಮೀಷನರೇಟ್‌ನ ಪೊಲೀಸ್ ಕಾನ್ಸ್‌ಟೆಬಲ್‌ವೊಬ್ಬರು ಆಯ್ಕೆಯಾಗಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯ ಸಾಮಾಜಿಕ ಜಾಲತಾಣ(ಟ್ವಿಟರ್) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ಟೆಬಲ್ ಎಚ್.ಎಂ ಲೋಕೇಶ್ ಮೆಕ್ಸಿಕೋ ರಾಯಭಾರ ಕಚೇರಿಗೆ ಆಯ್ಕೆಯಾಗಿರುವುದು ಇಡೀ ಪೊಲೀಸ್ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ: ಪ್ರಧಾನಿ ಮೋದಿ

ಸಂವಹನ, ಕಂಪ್ಯೂಟರ್ ಮತ್ತು ಇಂಗ್ಲಿಷ್‌ನಲ್ಲಿ ಅನನ್ಯ ಕೌಶಲ್ಯ ಹೊಂದಿದ್ದ ಎಚ್.ಎಂ ಲೋಕೇಶ್, ಕರೊನಾ ಸಮಯದಲ್ಲಿ ನಾಗರಿಕರ ಜತೆ ನಿರಂತರ ಸಂಪರ್ಕ ಸಾಧಿಸಿ ಸಂದೇಹಗಳಿಗೆ ಉತ್ತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.

ಇತ್ತೀಚೆಗೆ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಹುದ್ದೆಗೆ ಸಂದರ್ಶನ ಎದುರಿಸಿದ್ದ ಕಾನ್ಸ್‌ಟೆಬಲ್ ಲೋಕೇಶ್ ವಿವಿಧ ಹಂತಗಳಲ್ಲಿ ಸಂದರ್ಶನ ಎದುರಿಸಿ ಆಯ್ಕೆಯಾಗಿದ್ದಾರೆ. ಲೋಕೇಶ್ ಅವರು, ಪ್ರವೀಣ್ ಸೂದ್, ಮೇಘರಿಕ್, ಸುನೀಲ್ ಕುಮಾರ್, ಭಾಸ್ಕರ್ ರಾವ್, ಕಮಲ್ ಪಂತ್ ಮತ್ತು ಪ್ರತಾಪ್ ರೆಡ್ಡಿ ಅವಧಿಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಲೋಕೇಶ್ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಗೆ ಆಯ್ಕೆಯಾಗಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜತೆ ಸೇರಿ ಹೆತ್ತ ಮಕ್ಕಳ ಬಾಳನ್ನು ಕೊನೆಗಾಣಿಸಿದ ಪಾಪಿ ತಾಯಿ!