ಹೈದರಾಬಾದ್: ಪೊಲೀಸರಿಂದ ತಪ್ಪಿಕೊಳ್ಳುವ ಕಳ್ಳನೊಬ್ಬ ಆ್ಯಂಬುಲೆನ್ಸ್ ಕದ್ದು ಪರಾರಿಯಾಗು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ(Video) ವೈರಲ್ ಆಗಿದೆ.
ಈ ಘಟನೆ ಹೈದರಾಬಾದ್ನ ಹಯಾತ್ನಗರದಲ್ಲಿ ಭಾನುವಾರ ನಡೆದಿದೆ. ಕೊನೆಗೂ ಆ್ಯಂಬುಲೆನ್ಸ್ ಚೇಜ್(ಬೆನ್ನಟ್ಟಿ) ಮಾಡಿದ ಪೊಲೀಸರು ಕಳ್ಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸುದ್ದಿ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತೀವೆ.
ಇದನ್ನೂ ಓದಿ: ಈ 3 ನಕ್ಷತ್ರದಲ್ಲಿ ಜನಿಸಿದವರಿಗೆ ಅದೃಷ್ಟವೋ ಅದೃಷ್ಟ… 2025ರಲ್ಲಿ ಇವರಿಗೆ ರಾಜಯೋಗ ಗ್ಯಾರಂಟಿ! Birth Stars
ಘಟನೆಯ ಹಿನ್ನೆಲೆ.. ಪೊಲೀಸ್ ಮಾಹಿತಿ ಪ್ರಕಾರ, ಆರೋಪಿ ಕಳ್ಳತನ ಇತಿಹಾಸ ಹೊಂದಿದ್ದಾನೆ. ಹೀಗಾಗಿ, ಅವನನ್ನು ಬಲೆಗೆ ಬೀಳಿಸಲು ಪೊಲೀಸರು ಪ್ರಯ್ನಿಸುತ್ತಿರುವಾಗ, ಎಚ್ಚೆತ್ತ ಕಳ್ಳ ಇವರಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿದ್ದ ಆ್ಯಂಬುಲೆನ್ಸ್ ಬಳಸಿ ಹೈದರಾಬಾದ್-ವಿಜಯವಾಡ ಹೆದ್ದಾರಿ ಕಡೆ ಹೊರಟಿದ್ದಾನೆ. ಅಲ್ಲದೆ, ಸೈರನ್ ಬಳಸಿ ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದಾರೆ. ಇತನನ್ನು ಹಿಂಬಾಲಿಸಿದ ಪೊಲೀಸರ ಚೇಜ್ ಮಾಡಿದ್ದಾರೆ. ಇದು ವೈರಲ್ ವಿಡಿಯೋಗಳಲ್ಲಿ ತೋರಿಸಿಲಾಗಿದೆ. ಅಲ್ಲದೇ, ರಸ್ತೆಯ ಚೇಜ್ನಲ್ಲೇ ಮೂರು ಬಾರಿ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರೂ ಪರಾರಿಯಾಗುವ ದೃಶ್ತಗಳು ಕಾಣಸಿಗುತ್ತವೆ. ಕೊನೆಗೂ ಲಾರಿಗಳ ಸಹಾಯದಿಂದ ಆ್ಯಂಬುಲೆನ್ಸ್ಗೆ ಅಡ್ಡಗಟ್ಟಿ ಸೂರ್ಯಪೇಟ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
ಚಿಟ್ಯಾಲ ಎಂಬ ಪ್ರದೇಶದ ಬಳಿ ಕಳ್ಳನನ್ನು ಹಿಡಿಯಲ್ಲಿ ಪ್ರಯತ್ನಿಸಿದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಾನ್ರೆಡ್ಡಿಗೆ ಆ್ಯಂಬುಲೆನ್ಸ್ ವಾಹನ ತಗುಲಿದ ಪರಿಣಾಮ ಗಂಭೀರಗಾಯಗಳಾಗಿವೆ ಎನ್ನಲಾಗಿದೆ.(ಏಜೆನ್ಸಿಸ್).