ಸಿಂಧನೂರಿನಲ್ಲಿ ಕಳ್ಳತನವಾಗಿದ್ದ ಸರ ಮತ್ತು 20 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು. ಡಿವೈಎಸ್ಪಿ ಬಿ.ಎಸ್.ತಳವಾರ, ಪಿಐ ದುರುಗಪ್ಪ ಇದ್ದಾರೆ. 
ನ್ಯೂಸ್

ಪೊಲೀಸರಿಗೆ ಸಿಕ್ಕಿಬಿದ್ದ 20 ಬೈಕ್ ಕದ್ದವರು

ಸಿಂಧನೂರು: ಸರಗಳ್ಳತನ ಪ್ರಕರಣ ಭೇದಿಸಲು ಹೋದ ಪೊಲೀಸರಿಗೆ 20 ಬೈಕ್‌ಗಳನ್ನು ಕದ್ದ ಕಳ್ಳರು ಸಿಕ್ಕಿ ಬಿದ್ದಿದ್ದಾರೆ.

ನಗರದಲ್ಲಿ ಜೂ.11 ರಂದು ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋಟೆಲ್‌ಗೆ ನಡೆದು ಹೋಗುತ್ತಿದ್ದ ಮಹಿಳೆಯರ ಸರ ಕದ್ದು ಕಳ್ಳ ಪರಾರಿಯಾಗಿದ್ದ. ಡಿವೈಎಸ್ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಪಿಐ ದುರುಗಪ್ಪ ನೇತೃತ್ವದ ತಂಡ ಕಳ್ಳನಿಗಾಗಿ ಬಲೆ ಬೀಸಿದಾಗ, ನಗರದಲ್ಲಿಯೇ ಹಲವು ದಿನಗಳಿಂದ ಬೈಕ್ ಕದಿಯುತ್ತಿದ್ದ ಬಾಲಕ ಸೇರಿ ಮೂವರು ಬಲೆಗೆ ಬಿದ್ದಿದ್ದಾರೆ.

ಈ ಕುರಿತು ಡಿವೈಎಸ್ಪಿ ಬಿ.ಎಸ್.ತಳವಾರ ಪ್ರತಿಕ್ರಿಯಿಸಿ, ನಮ್ಮ ಪೊಲೀಸ್ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಸರ ಹಾಗೂ ಬೈಕ್ ಕಳ್ಳರನ್ನು ಬಂಧಿಸಿದೆ. ಸಿಂಧನೂರಿನ ಆರೀಫ್ ಅಬ್ದುಲ್ ರೆಹಮಾನ್, ಸಿದ್ದರಾಮಪ್ಪ ಅಯ್ಯಣ್ಣ ನಾಯಕ ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ 31.87 ಗ್ರಾಂ ಚಿನ್ನದ ಸರ ಹಾಗೂ 20 ಬೈಕ್ ಜಪ್ತಿ ಮಾಡಲಾಗಿದೆ. ಪೊಲೀಸರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆಂದು ತಿಳಿಸಿದರು. ಪಿಐ ದುರುಗಪ್ಪ, ಪಿಸಿಗಳಾದ ಶರಣಪ್ಪ ರಡ್ಡಿ, ಆದಯ್ಯ, ಸಿದ್ದಪ್ಪ, ಖಲೀಲ್‌ಪಾಷಾ, ಶರಣಬಸವ, ಅಜೀಮ್‌ಪಾಷಾ ಇದ್ದರು.