ನ್ಯೂಸ್

ಪಕ್ಕದ್ಮನೆ ಹುಡುಗಿಯನ್ನು ಟೆರೇಸ್​ನಿಂದ ತಳ್ಳಿದ್ರು; ಯುವತಿಗೆ ಗಂಭೀರ ಗಾಯ, ಮೂವರ ಬಂಧನ...

ಉತ್ತರಪ್ರದೇಶ: ಪಕ್ಕದಮನೆಯ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಟೆರೇಸ್​ ಮೇಲಿಂದ ತಳ್ಳಿದ್ದು, ಯುವತಿಯ ಪರಿಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೆಳಕ್ಕೆ ತಳ್ಳಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಘಾಜಿಪುರ್​ನ ವಾಲಿದ್​ಪುರ್ ಎಂಬಲ್ಲಿ ಶುಕ್ರವಾರ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಕೆಯ ನೆರೆಮನೆಯ ಹುಡುಗರೇ ಈ ಕೃತ್ಯ ಎಸಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಯುವತಿ ಅವರ ಹೆಸರುಗಳನ್ನು ಪೊಲೀಸರಿಗೆ ಹೇಳಿದ್ದಾಳೆ.

ಆರೋಪಿಗಳು ಆಕೆಯ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆಕೆ ವಿರೋಧಿಸಿದ್ದರಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಅವಳನ್ನು ಅಜಮ್​ಘರ್​ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್​)