ನ್ಯೂಸ್

ಬೈಕ್​​ನಲ್ಲಿ ಹಿಂಬಾಲಿಸಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋ ಪೊಲೀಸರ ವಶಕ್ಕೆ

ದಾವಣಗೆರೆ: ಬೈಕ್​​ನಲ್ಲಿ ಹಿಂಬಾಲಿಸುತ್ತ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ರೋಮಿಯೋನನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾದೀರ್ ಖಾನ್ ಬಂಧನಕ್ಕೆ ಒಳಗಾದ ಯುವಕ. ಈತ ಎಂಸಿಸಿ ಬಿ ಬ್ಲಾಕ್​​ನಲ್ಲಿ ಯುವತಿಯರಿಗೆ ಚುಡಾಯಿಸುತ್ತಿದ್ದನು. ಬೈಕ್​​ನಲ್ಲಿ ಯುವತಿಯರನ್ನು ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ ಕಿರುಕುಳ ನೀಡುತ್ತಿದ್ದನು. ಮೈ..ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಈತನ ಕಾಟ ತಾಳಲಾರದೆ ಕೆಲವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಕಷ್ಟು ವಿದ್ಯಾರ್ಥಿನಿಯರಿಗೆ ಕಾಟ ಕೊಟ್ಟ ಕುರಿತು ತನಿಖೆ ವೇಳೆ ಬಹಿರಂಗವಾಗಿದೆ.