ನವದೆಹಲಿ: (Lady Don Zikra ) ದೆಹಲಿಯ ಸೀಲಾಂಪುರದಲ್ಲಿ 17 ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 'ಲೇಡಿ ಡಾನ್' ಜಿಕ್ರಾನನ್ನು ಸೇರಿ 4 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ಸೀಲಾಂಪುರದಲ್ಲಿ ನಾಲ್ವರ ಗುಂಪೊಂದು 17 ವರ್ಷದ ಕುನಾಲ್ ಸಿಂಗ್ ಎನ್ನುವ ಬಾಲಕನನ್ನು ಕೊಲೆ ಮಾಡಿದ್ದರು. ಈ ಘಟನೆಯಲ್ಲಿ ಸಂಬಂಧಿ ಸೇರಿದಂತೆ ಲೇಡಿ ಡಾನ್' ಜಿಕ್ರಾ ಸೇರಿದಂತೆ ಇನ್ನೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಕ್ರಾ ಒಬ್ಬ ಬೌನ್ಸರ್. ಅವಳು ಈಶಾನ್ಯ ದೆಹಲಿಯಲ್ಲಿ ವಾಸಿಸುತ್ತಾಳೆ. ಈ ಜಿಕ್ರಾ ದೆಹಲಿಯಲ್ಲಿ ಸ್ಥಳೀಯ ದರೋಡೆಕೋರನಾಗಿದ್ದ ಹಾಶಿಮ್ ಬಾಬಾ ಪತ್ನಿ ಜೋಯಾಗೆ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದಳು. ದರೋಡೆಕೋರನ ಹೆಂಡತಿಯೊಂದಿಗೆ ಕೆಲಸ ಮಾಡುತ್ತಿದ್ದಳು, ಆದ್ದರಿಂದ ಅವಳು ಅವರಂತೆ ಆಗಬೇಕೆಂದು ಬಯಸಿದ್ದಳು. ಅವಳು ಅಲ್ಲಿದ್ದ ಬಂದೂಕುಗಳಿಂದ ರೀಲ್‌ಗಳನ್ನು ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಳು. ಹಾಶಿಮ್ ಬಾಬಾನಂತೆ ದರೋಡೆಕೋರಳಾಗಬೇಕೆಂಬ ಬಲವಾದ ಆಸೆಯನ್ನು ಹೊಂದಿದ್ದಳು. ಹೀಗಾಗಿ ತನ್ನನ್ನು ತಾನೇ ಲೇಡಿ ಡಾನ್ ಎಂದು ಘೋಷಿಸಿಕೊಂಡಿದ್ದಳು.
ಮಾದಕವಸ್ತು ಪ್ರಕರಣದಲ್ಲಿ ಹಾಸಿಂ ಬಾಬಾ ಬಂಧನವಾದಾಗ ಈ ಲೇಡಿ ಡಾನ್ ಆಕ್ರೋಶಗೊಂಡಳು. ಅವಳು ತನ್ನದೇ ಆದ ಗ್ಯಾಂಗ್ ಅನ್ನು ರಚಿಸಿಕೊಳ್ಳಲು ನಿರ್ಧರಿಸಿದಳು. 10 ರಿಂದ 12 ಯುವಕರ ಗ್ಯಾಂಗ್ ರಚನೆಯಾಯಿತು. ಜೋಯಾ ಮೂಲಕ ಹಾಶಿಮ್ ಬಾಬಾಗೆ ಹತ್ತಿರವಾಗಬೇಕೆಂದು ಮತ್ತು ಮಾದಕವಸ್ತು ವ್ಯವಹಾರದಲ್ಲಿ ಭಾಗವಹಿಸಬೇಕೆಂದು ಅವಳು ಬಯಸಿದ್ದಳು.
ದೆಹಲಿಯ ಕುನಾಲ್ ಸಿಂಗ್ ಎಂಬ ಹುಡುಗನಿಗೆ, ಲೇಡಿ ಡಾನ್ ಜಿಕ್ರಾ ಸಹೋದರನ ಜೊತೆ ಕೆಲವು ಸಮಯದಿಂದ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ. ಕುನಾಲ್ ಕುಟುಂಬದ ಕೆಲವರು ಜಿಕ್ರಾ ಸಹೋದರ ಸಾಹಿಲ್ ಮೇಲೆ ಹಲ್ಲೆ ನಡೆಸಿದರು, ಇದರಿಂದಾಗಿ ಪೊಲೀಸರು ಕುನಾಲ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿದರು. ತನ್ನ ಸಹೋದರನ ಮೇಲೆ ದಾಳಿ ಮಾಡಿದ ಕುನಾಲ್ ಸಿಂಗ್ ಮೇಲೆ ದ್ವೇಷ ಸಾಧಿಸಿದ್ದ ಲೇಡಿ ಡಾನ್, ಅವನನ್ನು ಕೊಲ್ಲಲು ಯೋಜಿಸಿದಳು.
ಗುರುವಾರ ರಾತ್ರಿ ಹಾಲಿನ ಪ್ಯಾಕೆಟ್ ತರಲು ಮನೆಯಿಂದ ಹೊರಗೆ ಹೋದಾಗ ಕುನಾಲ್ಗೆ ಜಿಕ್ರಾ ಗ್ಯಾಂಗ್ ಅಟ್ಯಾಕ್ ಮಾಡಿದೆ. ಅವಳು ಕುನಾಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಳು. ಕುನಾಲ್ ಅವರನ್ನು ಗಮನಿಸಿದ ಸ್ಥಳೀಯರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ನಂತರ, ಹತ್ಯೆಗೀಡಾದ 17 ವರ್ಷದ ಬಾಲಕನ ಕುಟುಂಬವು ಲೇಡಿ ಡಾನ್ ಸಿಕ್ರಾ ಮತ್ತು ಆಕೆಯ ಸಹೋದರ ಸಾಹಿಲ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿತು. ಸಿಕ್ರಾ ಮತ್ತು ಅವನ ಸಹಚರರು ನಿಯಮಿತವಾಗಿ ಸೀಲಾಂಪುರದಲ್ಲಿ ಬಂದೂಕುಗಳೊಂದಿಗೆ ಗಸ್ತು ತಿರುಗುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರೊಂದಿಗೆ, ಪೊಲೀಸರು ಸಿಕ್ರಾನನ್ನು ಬಂಧಿಸಿದರು.