ನ್ಯೂಸ್

ಪೊಲೀಸರ ವೇಷದಲ್ಲಿ 80 ಲಕ್ಷ ರೂ. ಸುಲಿಗೆ ಮಾಡಿ ಸ್ಮಗ್ಲರ್​ಗಳ ಮೋಜು ಮಸ್ತಿ!

Webdesk - Athul Damale

ಬೆಂಗಳೂರು: ತಮ್ಮನ್ನು ತಾವು ಪೊಲೀಸ್ ಎಂದು ಕರೆದುಕೊಂಡು 80 ಲಕ್ಷ ಸುಲಿಗೆ ಮಾಡಿದ್ದ ಕುಖ್ಯಾತ ಅಂತರ್​ರಾಜ್ಯ ಸ್ಮಗ್ಲರ್​ಗಳನ್ನು ಈಗ ನಿಜ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 27 ನೇ ತಾರೀಖಿನಂದು ಕಾರಿನಲ್ಲಿ ಬಂದಿದ್ದ ನಾಲ್ವರು, ಶಾಂತಿನಗರ ಬಸ್ ನಿಲ್ದಾಣದ ಹತ್ತಿರ ಕೆ.ಹೆಚ್.ರಸ್ತೆಯ ಸಿಗ್ನಲ್ ಬಳಿ ತಮ್ಮನ್ನು ತಾವು ಪೊಲೀಸರು ಎಂದು ಕರೆದುಕೊಂಡು ದರೋಡೆ ನಡೆಸಿದ್ದರು.

ಸಂತ್ರಸ್ತರು, ಅಡಿಕೆ ವ್ಯಾಪಾರಕ್ಕೆ ಸಂಭಂದಿಸಿದ 80 ಲಕ್ಷ ರೂ. ಹಣವನ್ನು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸಾಗಿಸುತ್ತಿದ್ದರು. ಆಗ ಆಂಧ್ರ ಈ ನಾಲ್ವರು ಆರೋಪಿಗಳು ತಮ್ಮ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಪೊಲೀಸರ ವೇಷದಲ್ಲಿ ಬಂದಿದ್ದರು. ತಮ್ಮನ್ನು ತಾವು ಪೊಲೀಸರು ಎಂದು ಕರೆದುಕೊಂಡು ಆ 80 ಲಕ್ಷ ರೂ. ಹಣವನ್ನು ಲೂಟಿ ಮಾಡಿ ಅಲ್ಲಿಂದ ಪರಾರಿ ಆಗಿದ್ದರು.

ಭತಲ್ ಶಿವರಾಮ್, ಶೇಖ್ ಚೆಂಪತಿ, ಶೇಖ್ ಚೆಂಪತಿ, ಜಾಕೀರ್ ಎನ್ನುವ ಈ ನಾಲ್ವರು ಖತರ್ನಾಕ್​ ಸ್ಮಗ್ಲರ್​ಗಳು, ಹಣವನ್ನು ಕದ್ದ ನಂತರ ಮೋಜು ಮಸ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದಾದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಆರೋಪಿಗಳು ಅರೆಸ್ಟ್​ ಆಗಿದ್ದಾರೆ. ಸದ್ಯಕ್ಕೆ ಅಂತರ್​ ರಾಜ್ಯ ಸ್ಮಗ್ಲರ್​ಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.