ಚೆನ್ನೈ: ಪೂರ್ವಾನುಮತಿ ಇಲ್ಲದೆ ಅಯ್ಯಪ್ಪಂತಂಗಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರು ಪೂಜೆ ಮತ್ತು ವಿಶೇಷ ಶಾಖಾ ತರಬೇತಿ ಅವಧಿಯನ್ನು ನಡೆಸಿದ್ದಕ್ಕಾಗಿ ಗುರುವಾರ ಪೋರೂರು ಬಳಿ ಕನಿಷ್ಠ 39 RSS ಸದಸ್ಯರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಆಹಾರ ಸೇವಿಸಿ! |weight loss dessert
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, RSS ಶತಮಾನೋತ್ಸವ ಹಿನ್ನೆಲೆ ಮೈದಾನವೊಂದರಲ್ಲಿ 50-60 ಕಾರ್ಯಕರ್ತರು ಪೂಜೆ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ್ದಾರೆ ಎಂಬ ಕಾರಣ ನೀಡಿ, ಇದ್ದಕ್ಕಿದ್ದಂತೆ ಪೊಲೀಸರು 39 ಕಾರ್ಯಕರ್ತತನ್ನು ಬಂಧಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತರ ಬಂಧನವನ್ನು ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಖಂಡಿಸಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ ಶತಮಾನೋತ್ಸವದ ಆಚರಣೆಯ ಮಧ್ಯೆ ಪೊಲೀಸರು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಕರೆ ನೀಡಿದರು ಮತ್ತು ಬಂಧನವನ್ನು ಖಂಡಿಸಿದರು. ಮಾಫಿಯಾಗಳು ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಕೊಲೆಗಳು ನಡೆಯುತ್ತಿವೆ. ಆದರೆ, ಪೊಲೀಸರು ಮಾತ್ರ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದಿದ್ದಾರೆ.(ಏಜೆನ್ಸೀಸ್)