ನ್ಯೂಸ್

ಬರೋಬ್ಬರಿ ಒಂದೂವರೆ ಕೋಟಿ ರೂ. ಮೌಲ್ಯದ ತವಾ ಕುಕ್ಕರ್ ವಶಕ್ಕೆ!

ಬೆಂಗಳೂರು: ಬೆಂಗಳೂರಿನಲ್ಲಿ ಒಂದೂವರೆ ಕೋಟಿ‌ ಮೌಲ್ಯದ ತವಾ ಕುಕ್ಕರ್ ವಶಕ್ಕೆ ಪಡೆಯಲಾಗಿದೆ.

ತವಾ ಕುಕ್ಕರ್ ಸಿಕ್ಕಿದ್ದು ಎಲ್ಲಿ, ಯಾರಿಗೆ?

ಈ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದ್ದು ಬ್ಯಾಡರಗಿಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಂಗ್ರಹಿಸಿಟ್ಟಿದ್ದ ತವಾ ಕುಕ್ಕರನ್ನು ಪೊಲೀಸರ ಸಹಯೋಗದಲ್ಲಿ ದಾಳಿ ಮಾಡಿದ್ದ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ 4533 ಕುಕ್ಕರ್ 11 ಸಾವಿರ ತವಾ ಪತ್ತೆ ಯಾಗಿದೆ. ಆದರೆ ಯಾರ ಪರವಾಗಿ ಹಂಚಲು ಶೇಖರಿಸಲಾಗಿತ್ತು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.