ನ್ಯೂಸ್

ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಿ; ಡಾ. ಮಲ್ಲಿಕಾರ್ಜುನ

ರಾಣೆಬೆನ್ನೂರ: ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಡಾ. ಮಲ್ಲಿಕಾರ್ಜುನ ಎಚ್.ಬಿ. ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ಲರ್ನ್ ಸ್ಕೂಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ದಂತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಚಾಕೋಲೇಟ್, ಐಸ್‌ಕ್ರಿಂನಂತಹ ಪದಾರ್ಥಗಳ ಸೇವನೆ ಹೆಚ್ಚಾಗುತ್ತಿದ್ದು ಇದು ಅವರ ದಂತ ಪಂಕ್ತಿಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರ ಪದಾರ್ಥಗಳನ್ನು ನೀಡಬೇಕು ಎಂದರು.
ದಂತ ವೈದ್ಯರಾದ ಡಾ.ಬಿ.ಎಸ್. ಪಾಟೀಲ ಮತ್ತು ಡಾ. ಅಮರನಾಥ ಉಪಾಸಿ, ಡಾ. ಪ್ರಕಾಶ ಲೋಕಂಡೆ, ಡಾ. ಮಹಾಂತೇಶ ಶಿರಗಾಂವಿ, ಡಾ. ಪ್ರವೀಣ ಉದುಗನಿ, ಡಾ. ಪ್ರಮೋದ ಉದುಗನಿ, ಡಾ. ಪ್ರಸನ್ನಕುಮಾರ ಕಡಕೋಳ ಮಕ್ಕಳ ದಂತ ತಪಾಸಣೆ ನಡೆಸಿದರು.
ಸ್ಕೂಲ್‌ನ ಕಾರ್ಯದರ್ಶಿ ಪ್ರಶಾಂತ ಕಡಕೋಳ, ಕವಿತಾ ಕಡಕೋಳ, ರಾಜೇಶ್ವರಿ ಹನಗೋಡಿಮಠ, ಪ್ರಾಚಾರ್ಯ ರೂಪೇಶ ಘಾಟಗೆ, ಆಧ್ಯಾ, ಮಮತಾ ಘಾಟಗೆ, ಅಶ್ವಿನಿ ಅಗಡಿ, ರುಕ್ಸಾನ, ಗೀತಾ, ಸುಮಾ, ಹರ್ಷಿತಾ, ನಿಖಾತ್, ರಘುನಂದನ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.