ನ್ಯೂಸ್

ಪೋಕ್ಸೋ ಅಪರಾಧಿಗೆ 20 ವರ್ಷ ಸಜೆ

ಚನ್ನಪಟ್ಟಣ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 24 ಸಾವಿರ ರೂ. ದಂಡ ವಿಧಿಸಿ ರಾಮನಗರದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ರುದ್ರಾಪುರದ ಪುನೀತ್​(30) ಶಿೆಗೆ ಗುರಿಯಾದವ.

ಏನಿದು ಪ್ರಕರಣ?: 2020ರ ಜು.24ರಂದು 11 ವರ್ಷದ ಬಾಲಕಿ ತಿಂಡಿ ತೆಗೆದುಕೊಂಡು ಮನೆಗೆ ಹೋಗುವಾಗ ನಿಮ್ಮ ತಂದೆ ಕರೆಯುತ್ತಿದ್ದಾರೆ, ಅವರ ಬಳಿಗೆ ಹೋಗೋಣ ಎಂದು ಪುಸಲಾಯಿಸಿ, ದ್ವಿಚಕ್ರ ವಾಹನದಲ್ಲಿ ಚನ್ನಪ್ಪನಗುಡ್ಡೆಗೆ ಕರೆತಂದು ಲೈಂಗಿಕ ದೌರ್ಜನ್ಯ ಎಸಗಿ, ಬಾಲಕಿಯ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಬಾಲಕಿಯ ಪಾಲಕರು ಅಕ್ಕೂರು ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ದುರುಳನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಆರೋಪ ಸಾಬೀತಾದ ಕಾರಣ ನ್ಯಾಯಾಧೀಶೆ ಎಂ.ಪಂಚಾರಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರ ವಿಶೇಷ ಅಭಿಯೋಜಕಿ ಎನ್​.ವೀಣಾಕುಮಾರಿ ವಾದ ಮಂಡಿಸಿದ್ದರು.