5 ವರ್ಷದ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣ 
ನ್ಯೂಸ್

POCSO Act: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

5 ವರ್ಷದ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಗೆ ಶಿಕ್ಷೆ

2019ರ ಪ್ರಕರಣದಲ್ಲಿ ಆರೋಪಿಗಗೆ 20 ವರ್ಷ ಜೈಲು ಶಿಕ್ಷೆ ನೀಡಿದ ಪೋಕ್ಸೋ ಕೋರ್ಟ್

6,000 ರೂ. ದಂಡ ಹಾಗೂ ಸಂತ್ರಸ್ತೆಗೆ ಪರಿಹಾರ ನೀಡಲು ನಿರ್ದೇಶನ

Thane Court Verdict: ಐದು ವರ್ಷದ ಪುಟ್ಟ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಠಾಣೆಯ ವಿಶೇಷ ಪೋಕ್ಸೋ (POCSO) ಕೋರ್ಟ್ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2019ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಆಕಾಶ್ ಬಾಬುರಾವ್ ತೋರತ್ ಎಂಬಾತನಿಗೆ ಶಿಕ್ಷೆಯಾಗಿದೆ. ಈ ಕೇಸ್‌ನಲ್ಲಿ ಮಗು ನೀಡಿದ ಸಾಕ್ಷಿಯೇ ಅತ್ಯಂತ ಪ್ರಮುಖವಾಯಿತು. ಮಗುವಿಗೆ ಯಾರೂ ಹೇಳಿಕೊಟ್ಟು ಸಾಕ್ಷಿ ಹೇಳಿಸಿಲ್ಲ ಎಂಬುದನ್ನು ಗಮನಿಸಿದ ಕೋರ್ಟ್, ಆಕೆಯ ಹೇಳಿಕೆಯನ್ನೇ ಆಧರಿಸಿ ಆರೋಪಿಗೆ ಶಿಕ್ಷೆ ಖಾಯಂ ಮಾಡಿದೆ.

ನಡೆದಿದ್ದೇನು?

ಡಿಸೆಂಬರ್ 1, 2019 ರಂದು ಠಾಣೆಯ ಮುಂಬ್ರಾ ಪ್ರದೇಶದ ಚಾಲ್‌ನಲ್ಲಿ ಮಗು ಆಟವಾಡುತ್ತಿದ್ದಾಗ, ನೆರೆಮನೆಯಲ್ಲಿದ್ದ ಆಕಾಶ್ ಮಗುವನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದ. ಟಿವಿ ಹಾಕಿ ಕೊಟ್ಟು ಮಗುವಿನ ಮೇಲೆ ದೌರ್ಜನ್ಯ ಎಸಗಿದ್ದ. ಹೆದರಿದ ಮಗು ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿತ್ತು. ತಕ್ಷಣ ತಾಯಿ ಪೊಲೀಸರಿಗೆ ದೂರು ನೀಡಿದ್ದರು. (ಏಜೆನ್ಸೀಸ್​)

ಏನು ಶಿಕ್ಷೆ?

ವಿಶೇಷ ಪೋಕ್ಸೋ ಕೋರ್ಟ್ ಆರೋಪಿಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ 6ರಡಿ20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿದ್ದು, ದಂಡ ತೆರಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರ ಜತೆಗೆ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354A (ಲೈಂಗಿಕ ಕಿರುಕುಳ) ಅಡಿಯಲ್ಲಿ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,000 ರೂಪಾಯಿ ದಂಡ ವಿಧಿಸಲಾಗಿದೆ. ಎರಡೂ ಶಿಕ್ಷೆಗಳನ್ನು ಆರೋಪಿ ಒಟ್ಟಿಗೆ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ಆಧಾರವಿಲ್ಲದೇ ರಾಹುಲ್ ಗಾಂಧಿ ವಿರುದ್ಧ ಆರೋಪ: ಮಾಧ್ಯಮಗಳ ಗಮನ ಸೆಳೆಯಲು ಪ್ರಸ್ತಾಪಿಸುತ್ತಿದ್ದೀರಾ?; ವಕೀಲರಿಗೆ ಸಿಜೆಐ ತರಾಟೆ | CJI

ಎರಡೂ ಶಿಕ್ಷೆಗಳನ್ನು ಆರೋಪಿ ಒಟ್ಟಿಗೆ ಅನುಭವಿಸಬೇಕಾಗುತ್ತದೆ. ಜೊತೆಗೆ ಸಂಗ್ರಹವಾಗುವ 6,000 ರೂ. ದಂಡವನ್ನು ಮಗುವಿಗೆ ನೀಡಬೇಕು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ (DLSA) ಸಂತ್ರಸ್ತ ಮಗುವಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೋರ್ಟ್ ಆದೇಶಿಸಿದೆ. (ಏಜೆನ್ಸೀಸ್​)