ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗದಿಂದ ವಾಣಿಜ್ಯ ಹಾಗೂ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಮುಸ್ತಾಕ್, ಎ.ವಿ.ಶ್ರೀಕಾಂತ್, ಮಂಜುಳಾ ರಾಜು,ಎಚ್.ಎಲ್.ರವಿ, ಸಿ.ರಾಜು ಇದ್ದರು. 
ನ್ಯೂಸ್

ಪಿಎಂಈಜಿಪಿ ಸಾಲಾಧಾರಿತ ಸಬ್ಸಿಡಿ ಯೋಜನೆ

ನವೀನ ಬಿ.ಎಂ

ಶಿವಮೊಗ್ಗ: ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ(ಪಿಎಂಈಜಿಪಿ)ವನ್ನು ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಸಾಲಾಧಾರಿತ ಸಬ್ಸಿಡಿ ಯೋಜನೆಯ ಸದುಪಯೋಗವನ್ನು ಸಮಾಜದ ಎಲ್ಲ ವರ್ಗದ ಜನರು ಪಡೆಯಬಹುದು ಎಂದು ವಾಣಿಜ್ಯ ಹಾಗೂ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕ ಸುರೇಶ್ ಹೇಳಿದರು.

ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗದಿಂದ ಶನಿವಾರ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು 2008ರಲ್ಲಿ ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಿಎಂಈಜಿಪಿಯನ್ನು ಜಾರಿಗೊಳಿಸಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರವನ್ನು ಶ್ಲಾಘಿಸುವ ಉದ್ದೇಶದಿಂದ ಪ್ರತಿ ವರ್ಷ ಆ.30ರಂದು ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಫಲಾನುಭವಿಗಳಾಗಲು ನಿಯಮಗಳು, ಕಾರ್ಯ ಯೋಜನೆ, ಬ್ಯಾಂಕ್‌ಗಳ ಪಾತ್ರ, ಇಲಾಖೆಯ ಜವಾಬ್ದಾರಿಗಳ ಕುರಿತಾಗಿ ಸವಿವರವಾದ ಮಾಹಿತಿ ನೀಡಿದರು.
ಕ್ಲಬ್ ಅಧ್ಯಕ್ಷ ಮುಸ್ತಾಕ್ ಮಾತನಾಡಿ, ಸರ್ಕಾರದ ಹಲವಾರು ಯೋಜನೆಗಳು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಪ್ರೋತ್ಸಾಹಕ್ಕೆಂದೇ ಜಾರಿಯಲ್ಲಿದ್ದು, ಆನ್‌ಲೈನ್‌ನಲ್ಲಿ ಈ ಯೋಜನೆಗಳ ಬಹುತೇಕ ಪ್ರಕ್ರಿಯೆಗಳು ನಡೆಯುವುದರಿಂದ ಸೇವೆಗಳು ಪಾರದರ್ಶಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಜನರಿಗೆ ಲಭಿಸುತ್ತಿವೆ ಎಂದರು.
ಕ್ಲಬ್ ಕಾರ್ಯದರ್ಶಿ ರೋ.ಎ.ವಿ.ಶ್ರೀಕಾಂತ್, ವಲಯ ಲೆಫ್ಟಿನೆಂಟ್ ರೋ. ಮಂಜುಳಾ ರಾಜು, ಕ್ಲಬ್ ಕಲಿಕಾ ಮಾರ್ಗದರ್ಶಿ ರೋ. ಎಚ್.ಎಲ್.ರವಿ, ಮಾಜಿ ಅಧ್ಯಕ್ಷ ರೋ. ಸಿ.ರಾಜು ಪಾಲ್ಗೊಂಡಿದ್ದರು.