PM Punjab Visit: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 9 ರಂದು ಪಂಜಾಬ್ ಸೇರಿದಂತೆ ಪ್ರವಾಹ ಪೀಡಿತ ಉತ್ತರ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದ ಪಂಜಾಬ್ನ ಗುರುದಾಸ್ಪುರ್, ಅಮೃತಸರ ಮತ್ತು ತರಣ್ ತರಣ್ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನಿಲ್ ಜಾಖರ್, ಪ್ರಧಾನಿ ಭೇಟಿಯನ್ನು ಖಚಿತಪಡಿಸಿದ್ದಾರೆ. ಮೋದಿಗೆ ಪಂಜಾಬ್ ಬಗ್ಗೆ ತುಂಬಾ ಕಾಳಜಿ ಇದ್ದು, ಚೀನಾ ಪ್ರವಾಸದಿಂದ ಹಿಂತಿರುಗುತ್ತಿದ್ದಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಮಾತನಾಡಿ ರಾಜ್ಯದ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ, ಇದಷ್ಟೆ ಅಲ್ಲದೇ ಪರಿಹಾರದ ವಿಷಯದಲ್ಲಿ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:11ರ ಬಾಲಕಿ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ರೇಪ್: ಅಪ್ರಾಪ್ತೆಗೆ ಹುಟ್ಟಿದ ಮಗು ಕೆಲವೇ ಕ್ಷಣಗಳಲ್ಲಿ ಸಾವು! UP Girl
ಮುಂದುವರೆದು ಮಾತನಾಡಿದ ಜಾಖರ್, ಪ್ರವಾಹದ ಕುರಿತು ಕೇಂದ್ರ ಮತ್ತು ಪ್ರಧಾನಿ ವಿರುದ್ಧ ಎಎಪಿ ಸರ್ಕಾರ ಮಾಡಿದ ಟೀಕೆಯನ್ನು ದಿಕ್ಕು ತಪ್ಪಿಸುವ ತಂತ್ರ ಎಂದು ಕರೆದರು. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದು. ಅದರಿಂದ ತಪ್ಪಿಸಿಕೊಳ್ಳಲು ಈ ರೀತಿಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದರು.
ಗುರುವಾರ (ಸೆಪ್ಟೆಂಬರ್ 4) ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ , ಪ್ರಧಾನಿಗೆ ಸಮಗ್ರ ವರದಿಯನ್ನು ಸಲ್ಲಿಸುವುದಾಗಿ ಹೇಳಿದ ನಂತರ ಭೇಟಿ ನಿಗದಿಯಾಗಿದೆ ಎನ್ನಲಾಗಿದ್ದು, ಶನಿವಾರ, ಪಂಜಾಬ್ ಸರ್ಕಾರದ ಉನ್ನತ ಅಧಿಕಾರಿಗಳು ಕೇಂದ್ರದ ವಿಪತ್ತು ಸಮಿತಿಯೊಂದಿಗೆ ಸಭೆ ನಡೆಸಿ 14,000 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ಗೆ ಮನವಿ ಮಾಡಿದರು.
ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪಂಜಾಬ್ ಸುಮಾರು ನಾಲ್ಕು ದಶಕಗಳಲ್ಲಿಯೇ ಅತ್ಯಂತ ಭೀಕರ ಪ್ರವಾಹವನ್ನು ಎದುರಿಸುತ್ತಿರುವ ಮಧ್ಯೆ ಈ ಭೇಟಿ ಬಂದಿದೆ. ಇದು ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಗಿದ್ದು, ಅನೇಕ ಜೀವ ಹಾನಿಗಳು ಸಂಭವಿಸಿವೆ. ಅನೇಕ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.(ಏಜೆನ್ಸೀಸ್)