ನ್ಯೂಸ್

ಸರ್ಕಾರಿ ವಿವಿ ಸಂಶೋಧನೆ ಸಾಮರ್ಥ್ಯ ಹೆಚ್ಚಳಕ್ಕೆ ‘ಪಿಎಂ ಪ್ರೊಫೆಸರ್‌ಶಿಪ್’

ಎನ್.ಎಲ್. ಶಿವಮಾದು

ಬೆಂಗಳೂರು: ವಿದೇಶಿ ವಿಶ್ವವಿದ್ಯಾಲಯಗಳಿಗೆ ಹೋಲಿಸಿಕೊಂಡರೆ ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಚಟುವಟಿಕೆಗಳು ಸೊರಗುತ್ತಿರುವ ವಿಷಯ ಹಲವು ವರದಿಗಳಲ್ಲಿ ಸಾಬೀತಾಗಿದೆ. ಈ ಕಾರಣದಿಂದ ಜಾಗತಿಕ ಮಟ್ಟದ ಸಂಶೋಧನೆ ಮತ್ತು ನಾವೀನ್ಯತೆ ಕೈಗೊಳ್ಳುವ ಉದ್ದೇಶದಿಂದ ಆರಂಭಿಸಿರುವ ‘ಪ್ರಧಾನ ಮಂತ್ರಿ ಪ್ರೊಫೆಷರ್‌ಶಿಪ್’ ಕಾರ್ಯಕ್ರಮಕ್ಕೆ ಬೆಂಗಳೂರು ವಿವಿ ಸೇರಿ ರಾಜ್ಯದ ಐದು ವಿಶ್ವವಿದ್ಯಾಲಯಗಳು ಆಯ್ಕೆಯಾಗಿವೆ.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವಿಶ್ವದರ್ಜೆಯ ಸಂಶೋಧನೆ ಮತ್ತು ನಾವೀನ್ಯತಾ ಸಾಮರ್ಥ್ಯ ಹೆಚ್ಚಳ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (ಎಎನ್‌ಆರ್‌ಎ್) ಮೂಲಕ ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ಪ್ರಧಾನ ಮಂತ್ರಿ ಪ್ರೊೆಷರ್‌ಶಿಪ್ ಆರಂಭಿಸಿದೆ. ರಾಜ್ಯದ ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಮತ್ತು ಕುವೆಂಪು ವಿವಿ (ಶಿವಮೊಗ್ಗ) ಆಯ್ಕೆಯಾಗಿದೆ.

ಮಾರ್ಗದರ್ಶನಕ್ಕೆ ಸಾಧಕರ ಆಯ್ಕೆ:

ಪ್ರತಿ ವಿಶ್ವವಿದ್ಯಾಲಯಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್, ವಿಜ್ಞಾನ, ತಂತ್ರಜ್ಞಾನ, ಕೃಷಿ, ವೈದ್ಯಕೀಯ, ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿ ಸೇವಾ ನಿವೃತ್ತರಾಗಿರುವ ವ್ಯಕ್ತಿಯನ್ನು ಮಾರ್ಗದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಬೇಕಿದೆ. ಈ ವ್ಯಕ್ತಿಯ ಸಾಧನೆಯ ಅನುಭವವನ್ನು ಬಳಸಿಕೊಂಡು ವಿವಿಗಳಲ್ಲಿ ಸಂಶೋಧನೆಗಳ ಮೌಲ್ಯ ಹೆಚ್ಚಿಸಲು ಆದ್ಯತೆ ನೀಡಲಾಗುತ್ತದೆ.

ಐಐಎಸ್‌ಸಿ, ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವವರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಬೆಂಗಳೂರು ವಿವಿಗೆ ಸುಮಾರು 11 ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಒಬ್ನರನ್ನು ಆಯ್ಕೆ ಮಾಡಿ ಸೆಪ್ಟೆಂಬರ್ ಅಂತ್ಯದೊಳಗೆ ಯುಜಿಸಿಗೆ ಕಳುಹಿಸಿಕೊಡಬೇಕಿದೆ.

ಮರ್ಗದರ್ಶಕರ ಜವಾಬ್ದಾರಿ ಏನು?

- ಆಯ್ಕೆ ಮಾಡಿಕೊಂಡಿರುವ ವಿವಿಯಲ್ಲಿ ಸಂಶೋಧನೆ ಮತ್ತು ನಾವೀನ್ಯತಾ ಸಾಮರ್ಥ್ಯ ಹೆಚ್ಚಿಸುವುದು.

- ವಿಶ್ವದರ್ಜೆಯ ಸಂಶೋಧನೆ ಪಡೆಯಲು ಅವಶ್ಯವಿರುವ ಮಾರ್ಗದರ್ಶನವನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ನೀಡುವುದು

- ಉದ್ಯಮ, ಕೈಗಾರಿಕೆ ಮತ್ತು ವಿವಿಗಳ ನಡುವೆ ಒಡಂಬಡಿಕೆ ಸಾಮರ್ಥ್ಯ ಹೆಚ್ಚಿಸುವುದು. ಸುಸ್ಥಿರ ಜ್ಞಾನ ವಿನಿಮಯವನ್ನು ಉತ್ತೇಜಿಸುವುದು

- ಮಾರ್ಗದರ್ಶಕರು ಯಾವುದೇ ಕಾರಣಕ್ಕೂ ಒಡಂಬಡಿಕೆಯ ಮುಖ್ಯಸ್ಥರಾಗಿರಬಾರದು. ಆರ್ ಆೃಂಡ್ ಡಿ ಸ್ನೇಹಿ ಪರಿಸರ ನಿರ್ಮಿಸುವುದಷ್ಟೇ ಅವರ ಕೆಲಸ

5 ವರ್ಷಗಳ ಅವಧಿ

ಇದು 5 ವರ್ಷಗಳ ಅವಧಿಯ ಯೋಜನೆಯಾಗಿದೆ. ಮೂರು ವರ್ಷಗಳ ನಂತರ ತಜ್ಞರ ಸಮಿತಿಯು ಯೋಜನೆಯನ್ನು ಪರಿಶೀಲಿಸಲಿದೆ. ಮಾರ್ಗದರ್ಶಕರು ಮುಂದಿನ 5 ವರ್ಷಗಳ ಅವಧಿಯನ್ನು ಗುರಿಯಾಗಿಟ್ಟುಕೊಂಡು ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಬೇಕು. ಇದರ ಜತೆಗೆ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಕೂಡ ಪೋಷಿಸಬೇಕು.

ವಾರ್ಷಿಕ 55 ಲಕ್ಷ ರೂ. ಸಹಾಯಧನ

ಪಿಎಂ ಪ್ರೊೆಸರ್ ಅವರಿಗೆ ವಾರ್ಷಿಕ 30 ಲಕ್ಷ ರೂ.ಗಳ ೆಲೋಶಿಪ್ ಸಿಗಲಿದೆ. ಜತೆಗೆ 24 ಲಕ್ಷ ರೂ,ಗಳನ್ನೂ ಸಂಶೋಧನೆ ಕೈಗೊಳ್ಳಲು ದೇಶೀಯ ಪ್ರಯಾಣ, ಉಪಕರಣಗಳು, ನಿರ್ವಹಣೆಗಾಗಿ ನೀಡಲಿದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಸೇರಿ ವಾರ್ಷಿಕ 55 ಲಕ್ಷ ರೂ. ಸಹಾಯಧನ ಲಭ್ಯವಾಗಲಿದೆ.

ವಿವಿಗೆ ಆಗುವ ಲಾಭವೇನು?

- ಸರ್ಕಾರಿ ವಿವಿಗಳು ಅನುದಾನದ ಕೊರತೆ ಎದುರಿಸುತ್ತಿರುವುದರಿಂದ ಈ ಅನುದಾನವು ವಿವಿಯನ್ನು ಆರ್ಥಿಕವಾಗಿ ಸಣ್ಣ ಪ್ರಮಾಣದ ಲಾಭ

- ಇಲ್ಲಿ ಕೈಗೊಳ್ಳುವ ಸಂಶೋಧನೆಯು ಜನಪ್ರಿಯವಾಗಿ ಪೇಟೆಂಟ್ ಕೈಗೊಂಡರೆ ವಿವಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ

- ಸರ್ಕಾರಿ ವಿವಿಗಳು ಕೂಡ ಖಾಸಗಿ ವಿವಿಗಳತೆ ಜತೆಗೆ ಸಂಶೋಧನೆಯಲ್ಲಿ ಪೈಪೋಟಿ ನೀಡಲು ಅನುಕೂಲ

-ಸರ್ಕಾರಿ ವಿವಿಗಳಲ್ಲಿ ಭಾಗಶಃ ಆರ್ಥಿಕವಾಗಿ ಹಿಂದುಳಿದವರು, ಗ್ರಾಮೀಣ ಮತ್ತು ಸರ್ಕಾರಿ ಸಂಸ್ಥೆ ಮಕ್ಕಳೇ ಇರುವುದರಿಂದ ಹೊಸ ಅವಕಾಶ

  • ಸರ್ಕಾರಿ ವಿವಿಗಳಲ್ಲಿನ ಸಂಶೋಧನೆಗಳ ಸಾಮರ್ಥ್ಯ ಹೆಚ್ಚಿಸಲು ಪಿಎಂ ಪ್ರೊೆಸರ್ ಯೋಜನೆಯು
ಉತ್ತಮ ಯೋಜನೆಗಳಲ್ಲಿ ಒಂದಾಗಿದೆ. ನ್ಯಾಕ್ ಮಾನ್ಯತೆ, ಎನ್‌ಆರ್‌ಐಎ್ ರ‌್ಯಾಂಕಿಂಗ್ ಜತೆಗೆ ಪಿಎಂ ಪ್ರೊೆಸರ್ ಯೋಜನೆಯು ವಿವಿ ಅಭಿವೃದ್ಧಿಗೆ ಪೂರಕವಾಗಿದೆ. - ಡಾ. ಎಸ್.ಎಂ. ಜಯಕರ್, ಬೆಂ.ವಿವಿ ಕುಲಪತಿ