ನವದೆಹಲಿ: ನೂತನ ಸಂಸತ್ ಭವನದ ಮುಂದೆ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದರು.
ಈ ಬಳಿಕ ಪ್ರಧಾನಿ ಮೋದಿ ಲಾಂಚನ ನಿರ್ಮಾಣದಲ್ಲಿ ತೊಡಗಿದ್ದ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಭಾಗವಹಿಸಿದ್ದರು.
6.5 ಅಡಿ ಎತ್ತರದ ಕಂಚಿನ ಲಾಂಛನವನ್ನು ನಿರ್ಮಿಸಲು 9 ತಿಂಗಳ ಕಾಲ ಅವಧಿ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ.
ಈ ಲಾಂಛನ 9500 ಕೆಜಿ ತೂಕವಿದ್ದು, ಅಗಲ 4.4 ಅಡಿ ಇದೆ. ಅತ್ಯಾಧುನಿಕವಾಗಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನ ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. (ಏಜೆನ್ಸೀಸ್)