ನ್ಯೂಸ್

ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ; ರಾಜ್ಯಪಾಲರು, ಮುಖ್ಯಮಂತ್ರಿಯವರಿಂದ ಸ್ವಾಗತ

ಬೆಂಗಳೂರು: ‘ಏರೋ ಇಂಡಿಯಾ-2023’ರ ಉದ್ಘಾಟನೆ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಜಧಾನಿ ಬೆಂಗಳೂರಿಗೆ ಆಗಮಿಸಿದರು. ಇದೀಗವಷ್ಟೇ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತಲುಪಿದ ಅವರನ್ನು ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು.

ಇಂದು ರಾಜಭವನದಲ್ಲಿ ತಂಗಲಿರುವ ಪ್ರಧಾನಿ ಮೋದಿ ನಾಳೆ ಬೆಳಗ್ಗೆ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯ-2023 ಪ್ರದರ್ಶನ ಉದ್ಘಾಟಿಸಲಿರುವರು. ಬೆಳಗ್ಗೆ ವಿಶೇಷ ಹೆಲಿಕಾಪ್ಟರ್​​ನಲ್ಲಿ ಅವರು ಏರೋ ಇಂಡಿಯಾ ಪ್ರದರ್ಶನದ ಸ್ಥಳ ತಲುಪಲಿದ್ದಾರೆ.

ಅಲ್ಲಿ ರಕ್ಷಣಾ ಕ್ಷೇತ್ರದ ವಸ್ತುಪ್ರದರ್ಶನ, ಮಳಿಗೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅವರೊಂದಿಗೆ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಮಧ್ಯಾಹ್ನವೇ ದೆಹಲಿಗೆ ತೆರಳುವರು.