ನ್ಯೂಸ್

ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಗಿಫ್ಟ್​

ನವದೆಹಲಿ: ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.

ಇದೇ ವೇಳೆ 8.5 ಕೋಟಿ ರೈತರಿಗೆ ಕಿಸಾನ್​ ಸಮ್ಮಾನ್​ ಯೋಜನೆಯ 6ನೇ ಕಂತಿನ 17 ಸಾವಿರ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ, ಒಟ್ಟು 1 ಲಕ್ಷ ಕೋಟಿ ರೂ. ಯೋಜನೆಗೆ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್​ ಮೂಲಕ ಕರ್ನಾಟಕ ಹಾಸನ ಉಗಣೆ ಪತ್ತಿನ ರೈತರ ಸಂಘದ ಸದಸ್ಯರ ಸಜೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಿದರು. ಹಾಸನ ತಾಲೂಕು ಉಗನೆ ಗ್ರಾಮದ ದೇವೇಂದ್ರ ಹಾಗೂ ಬಸವೇಗೌಡ ಎಂಬವರ ಜತೆಗೆ ಪ್ರಧಾನಿ ಮಾತನಾಡಿದರು. ಕೃಷಿ ಹಾಗೂ ಸೊಸೈಟಿಗಳ ಕುರಿತು ಚರ್ಚಿಸಿದರು.