ನವದೆಹಲಿ: ಇದೇ ಸೆಪ್ಟೆಂಬರ್ 17 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಕ್ಕಾಗಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇಂದು (ಸೆ.16) ಮೋದಿಗಾಗಿ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: 6 ಗಂಟೆ ಕಾಲ ಟಾಯ್ಲೆಟ್ ಲಾಕ್: ಎಷ್ಟೇ ಬಡಿದ್ರೂ ನೋ ರೆಸ್ಪಾನ್ಸ್, ಬಾಗಿಲು ಒಡೆದು ನೋಡಿದಾಗ ಕಾದಿತ್ತು ಶಾಕ್! Train
ಮೋದಿಯವರ 75 ನೇ ಹುಟ್ಟುಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ನಮೋ ಪ್ರಗತಿ ದಿಲ್ಲಿ - ಬಾಲ್ ಸ್ವರ್ ಸೇ ರಾಷ್ಟ್ರ ಸ್ವರ್ ತಕ್ ಎಂಬ ಹಾಡನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಈ ಹಾಡಿಗೆ 21 ವಿದ್ಯಾರ್ಥಿಗಳು ಧ್ವನಿಗೂಡಿಸಿದ್ದಾರೆ.
ಹಲವು ವರ್ಷಗಳಿಂದ ಪ್ರಧಾನಿ ಮೋದಿ ದೆಹಲಿಗಾಗಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಇದರ ಹೊರತಾಗಿಯೂ, ಹಿಂದಿನ ಸರ್ಕಾರಗಳು ಅವರ ವಿರುದ್ಧ ಅನುಚಿತ ಭಾಷೆಯನ್ನು ಬಳಸಿ, ನಿರಂತರವಾಗಿ ಟೀಕಿಸುತ್ತಾ ಬಂದಿವೆ. ಆದರೆ ನಮ್ಮ ಸರ್ಕಾರ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಎಂದು ಗುಪ್ತಾ ಹೇಳಿದ್ದಾರೆ.
ಮೋದಿಗಾಗಿ ಹಾಡು ಹಾಡಿದ ಶಾಲಾ ವಿದ್ಯಾರ್ಥಿಗಳಿಗೆ ರೇಖಾ ಗುಪ್ತ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ವಿದ್ಯಾರ್ಥಿಗಳು ನೀಡಿರುವ ಶುಭಾಶಯ ಪತ್ರಗಳ ಜೊತೆಗೆ ಈ ಹಾಡನ್ನು ಪ್ರಧಾನಿ ಮೋದಿಗೆ ಕಳುಹಿಸುವುದಾಗಿ ಅವರು ಭರವಸೆ ನೀಡಿದರು. ಈ ಹಾಡಿನಲ್ಲಿ ನೀವು ಅವರಿಗೆ ಬಹು ಭಾಷೆಗಳಲ್ಲಿ ಹಾರೈಸಿದ ರೀತಿ ಅವರಿಗೆ ಇಷ್ಟವಾಗುತ್ತದೆ ಎಂದು ಗುಪ್ತಾ ಅಲ್ಲಿದ್ದ ಮಕ್ಕಳಿಗೆ ತಿಳಿಸಿದರು.
(ಏಜೆನ್ಸೀಸ್)