Rajnath Singh 
ನ್ಯೂಸ್

ಪ್ರಧಾನಿ ಮೋದಿ ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ: ರಕ್ಷಣಾ ಸಚಿವ|Rajnath Singh

Rajnath Singh: ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಅಚಲವಾದ ಬದ್ಧತೆ ತೋರಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ (ಆಗಸ್ಟ್​,14) ಪುನರುಚ್ಚರಿಸಿದ್ದಾರೆ.

ಎಬಿಪಿ ನೆಟ್‌ವರ್ಕ್‌ನ ಇಂಡಿಯಾ ಅನ್‌ಶೇಕನ್​ನಲ್ಲಿ ಭಾಗವಹಿಸಿದ ಸಿಂಗ್, ಆಪರೇಷನ್ ಸಿಂಧೂರ ಸಮಯದಲ್ಲಿ ಸೇನಾ ಪಡೆಗಳ ಶೌರ್ಯಕ್ಕೆ ಗೌರವ ಸಲ್ಲಿಸಿದರು ಮತ್ತು ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇನೆ ನೀಡಿದ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡರು.

ಅಲ್ಲದೆ, ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಿದ ಭಾರತೀಯ ವಾಯುಪಡೆಯ ನಿಖರತೆ ಮತ್ತು ಧೈರ್ಯವನ್ನು ಗೌರವಿಸಲಾಯಿತು.

ಪ್ರಧಾನಿ ಮೋದಿ ಯಾರಿಗೂ ಮಣಿಯುವುದಿಲ್ಲ: ರಕ್ಷಣಾ ಸಚಿವ

ಭಾರತದ ನೀತಿಗಳ ಮೇಲೆ ಪ್ರಭಾವ ಬೀರಲು ವಿದೇಶಿ ಪ್ರಯತ್ನಗಳನ್ನು ಉಲ್ಲೇಖಿಸಿದ ಸಿಂಗ್, ಕೆಲವೊಮ್ಮೆ ವಿದೇಶಿ ಶಕ್ತಿಗಳು ಭಾರತವನ್ನು ಬಗ್ಗಿಸಲು ಅನಗತ್ಯ ಒತ್ತಡ ಹೇರಲು ಪ್ರಯತ್ನಿಸುತ್ತವೆ. ಆದರೆ, ಪ್ರಧಾನಿ ಮೋದಿ ಅದಕ್ಕೆ ತಲೆಬಾಗುವುದಿಲ್ಲ. ಮೋದಿ ಸುಂಕಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

1947 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಿಂಗ್​ ಒತ್ತಿ ಹೇಳಿದರು ಮತ್ತು ಭಾರತವು ತನ್ನ ಸ್ವತಂತ್ರ ಪ್ರಯಾಣದ 78 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ.ಆದರೆ, ಅತ್ಯಂತ ಮಹತ್ವದ್ದಾಗಿರುವುದು ನಮ್ಮ ನಾಗರಿಕರಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ಸಂಕಲ್ಪವನ್ನು ಬಲಪಡಿಸುವುದು. ಇಂದು, ಭಾರತವು ತನ್ನ ನಿರ್ಧಾರಗಳಲ್ಲಿ ದೃಢವಾಗಿ ನಿಂತಿದೆ ಮತ್ತು ಜಗತ್ತಿನ ಯಾವುದೇ ಶಕ್ತಿಯು ಅದನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಕಾರ್ಯಕ್ರಮದ ವಿಷಯ ಭಾರತ ಅಚಲ ಎಂಬುದು ಕೇವಲ ಒಂದು ವಿಷಯವಲ್ಲ, ಆದರೆ ಇದು ರಾಷ್ಟ್ರೀಯ ಸಂಕಲ್ಪದ ಅಭಿವ್ಯಕ್ತಿಯಾಗಿದೆ. 40 ಕೋಟಿ ನಾಗರಿಕರು ತಮ್ಮ ಸಮರ್ಪಣೆ, ತ್ಯಾಗ ಮತ್ತು ಪರಿಶ್ರಮದಿಂದ ಸ್ವತಂತ್ರ ಭಾರತವನ್ನು ನಿರ್ಮಿಸಿದ್ದಾರೆ. ಮುಂದಿನ 22 ವರ್ಷಗಳಲ್ಲಿ ೧೪೦ ಕೋಟಿ ಭಾರತೀಯರು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ಏಕೆ ನಿರ್ಮಿಸಲು ಸಾಧ್ಯವಿಲ್ಲ? ಎಂದು ಹೇಳಿದ್ದಾರೆ.

ಭಾವನಾತ್ಮಕ ನೆನಪುಗಳನ್ನು ವ್ಯಕ್ತಪಡಿಸಿದ ರಾಜನಾಥ್ ಸಿಂಗ್

ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್‌ ಉಗ್ರ ದಾಳಿಯಲ್ಲಿ ಬಲಿಯಾದವರ ಬಗ್ಗೆ ಮಾತನಾಡುವಾಗ ಸಚಿವರು ಭಾವುಕರಾದರು. ಭಯೋತ್ಪಾದಕರು ತಮ್ಮ ಧರ್ಮವನ್ನು ಕೇಳಿದ ನಂತರ ಅಮಾಯಕ ಜನರನ್ನು ಗುಂಡು ಹಾರಿಸಿದಾಗ ಕುಟುಂಬಗಳಿಗೆ ಏನಾಗಿರಬಹುದು ಎಂದು ನಾನು ಊಹಿಸಲೂ ಸಾಧ್ಯವಿಲ್ಲ. ಇದು ಕ್ರೌರ್ಯದ ಪರಮಾವಧಿ ಮತ್ತು ಭಾರತದ ಸಾಮಾಜಿಕ ಏಕತೆಯನ್ನು ಮುರಿಯಲು ಮತ್ತು ಸಾರ್ವಜನಿಕ ಭಾವನೆಗಳನ್ನು ಕೆರಳಿಸಲು ಉದ್ದೇಶಪೂರ್ವಕ ಪಿತೂರಿಯಾಗಿದೆ ಎಂದು ಸಿಂಗ್​ ಹೇಳಿದ್ದಾರೆ.(ಏಜೆನ್ಸೀಸ್​)