ನ್ಯೂಸ್

ವಾರಣಾಸಿಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ ಪ್ರಧಾನಿ ಮೋದಿ, ಗೆಲುವಿನತ್ತ ದಾಪುಗಾಲು!

ವಾರಣಾಸಿ: 18ನೇ ಸಾರ್ವತ್ರಕ ಚುನಾವಣೆಯ ಫಲಿತಾಂಶ ಇಂದು (ಜೂನ್​ 04) ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಮ್ಯಾಜಿಕ್​ ನಂಬರ್​ನತ್ತ ದಾಪುಗಾಲಿಟ್ಟಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ 72,133 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ.

ಆರಂಭಿಕ ಹಂತದ ಮತೆಎಣಿಕೆಯಲ್ಲಿ ಅಲ್ಪ ಹಿನ್ನಡೆಯನ್ನು ಸಾಧಿಸಿದ ಪ್ರಧಾನಿ ಮೋದಿ ಆ ನಂತರ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ 80 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿತು, ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷವು ನಂತರ ಮಿತ್ರಪಕ್ಷಗಳು ಕ್ರಮವಾಗಿ 10 ಮತ್ತು ಐದು ಸ್ಥಾನಗಳನ್ನು ಗೆದ್ದವು. ಈ ಬಾರಿ, ಉತ್ತರಪ್ರದೇಶದಲ್ಲಿ ಕಠಿಣ ಪೈಪೋಟಿ ಎದುರಾಗಿದ್ದು, ಸಂಜೆ ವೇಳೆಗೆ ಅಂತಿಮ ಚಿತ್ರಣ ಹೊರಬೀಳಲಿದೆ.