ನ್ಯೂಸ್

VIDEO | ಬೆಂಗಳೂರು ಏರ್ಪೋರ್ಟ್​​ನ ಹಾಡಿ ಹೊಗಳಿದ ಸೌತ್ ಸ್ಟಾರ್ ಮಾಧವನ್!

- ನಟ ಮಾಧವನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ 

ನವದೆಹಲಿ: ಬೆಂಗಳೂರು ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ನಟ ಮಾಧವನ್ ಶ್ಲಾಘಿಸಿದ್ದಾರೆ. ಮಾಧವನ್ ಟ್ವೀಟ್​​ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ನಟ, ಬರಹಗಾರ ಮತ್ತು ನಿರ್ದೇಶಕ ಆರ್. ಮಾಧವನ್ ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೊಸದಾಗಿ ತೆರೆಯಲಾದ ಟರ್ಮಿನಲ್‌ನಲ್ಲಿ ಮೂಲಸೌಕರ್ಯವನ್ನು ಶ್ಲಾಘಿಸಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್​​ಸ್ಟಾಗ್ರಾಮ್ ವಿಡಿಯೋ ಮಾಡಿದ ನಟ ಮಾಧವನ್ ಅವರು ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಯಾವುದೇ ವಿದೇಶಿ ಸ್ಥಳದಂತೆ ಇದೆ ಎಂದು ಹೊಗಳಿದ್ದಾರೆ.  ಭಾರತದಲ್ಲಿ ಮೂಲಭೂತ ಸೌಕರ್ಯಗಳನ್ನು ಅದ್ಭುತವಾಗಿ ಮಾಡಲಾಗುತ್ತಿದೆ. ನಾನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದೇನೆ. ಇದೊಂದು ಅದ್ಭುತ ಸ್ಥಳದಂತೆ ಕಾಣುತ್ತಿದೆ. ಎಕ್ಸಾಟಿಕ್ ಪ್ಲೇಸ್. ಇದೊಂದು ಏರ್ಪೋರ್ಟ್ ಎಂದರೆ ಯಾರೂ ನಂಬಲಾರರು. ಇಲ್ಲಿನ ಸೀಲಿಂಗ್​​ನಲ್ಲಿ ತೂಗುತ್ತಿರುವ ಗಿಡಗಳೆಲ್ಲ ನಿಜವಾದ ಗಿಡಗಳು. ಇವುಗಳಿಗೆಲ್ಲ ಪ್ರತಿದಿನ ಬೆಳಗ್ಗೆ ಸೀಲಿಂಗ್​​ನಿಂದ ನೀರು ಹಾಕಲಾಗುತ್ತದೆ ಎಂದಿದ್ದಾರೆ ಎಂದು ನಟ ವಿಡಿಯೋದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಅತ್ಯುತ್ತಮ. ಮಾಧವನ್ ಅವರು, 'ಮೂಲಸೌಕರ್ಯ ವಿಶ್ವದಲ್ಲೇ ಅತ್ಯುತ್ತಮವಾಗಿದೆ. ತುಂಬಾ ಹೆಮ್ಮೆ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.

ಮಾಧವನ್ ಪೋಸ್ಟ್​​ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. 'ಭಾರತದ ಅಭಿವೃದ್ಧಿಗಾಗಿ ನೆಕ್ಸ್ಟ್​ ಜನರೇಷನ್ ಮೂಲಭೂತ ಸೌಕರ್ಯಗಳು' ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. ವಿದೇಶಿ ವಿಮಾನ ನಿಲ್ದಾಣಗಳಿಗಿಂತ ಭಾರತದ ವಿಮಾನ ನಿಲ್ದಾಣಗಳು ಉತ್ತಮವಾಗಿವೆ ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ.