ನ್ಯೂಸ್

ವಿಶ್ವ ಪರಿಸರ ದಿನಾಚರಣೆಯಂದೇ ತಮ್ಮ ನಿವಾಸದಲ್ಲಿ ಸಿಂಧೂರ ಸಸಿ ನೆಟ್ಟ PM ಮೋದಿ: ಏನದರ ವಿಶೇಷತೆ?

PM Modi: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ PM ನರೇಂದ್ರ ಮೋದಿ ಅವರು ಇಂದು (ಗುರುವಾರ, ಜೂ.05) ನವದೆಹಲಿಯ ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಧೂರ ಸಸಿ ನೆಟ್ಟಿದ್ದಾರೆ.

1971ರ ಯುದ್ಧದ ಸಮಯದಲ್ಲಿ ಗಮನಾರ್ಹ ಧೈರ್ಯವನ್ನು ತೋರಿಸಿದ ಮಹಿಳೆಯರ ಗುಂಪೊಂದು ಮೋದಿ ಅವರಿಗೆ ಈ ಗಿಡವನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿತ್ತು ಎನ್ನುವುದೇ ವಿಶೇಷ. ಇದರ ಕುರಿತು ಪ್ರಧಾನಿ ಮೋದಿ ಎಕ್ಸ್​ ಖಾತೆಯಲ್ಲಿ,

‘1971ರ ಯುದ್ಧದಲ್ಲಿ ಧೈರ್ಯ ಮತ್ತು ಶೌರ್ಯದ ಅದ್ಭುತ ಉದಾಹರಣೆಯನ್ನು ನೀಡಿದ ಕಚ್‌ನ ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರು ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದಾಗ ನನಗೆ ಸಿಂಧೂರದ ಗಿಡವನ್ನು ಉಡುಗೊರೆಯಾಗಿ ನೀಡಿದರು. ವಿಶ್ವ ಪರಿಸರ ದಿನದಂದೇ ನನಗೆ ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಈ ಗಿಡವನ್ನು ನೆಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಈ ಗಿಡ ನಮ್ಮ ದೇಶದ ಮಹಿಳಾ ಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ’ ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರತಿನಿತ್ಯ ಬೆಳಗ್ಗೆ 2 ಅಂಜೂರ ತಿನ್ನುವುದರಿಂದ ಈ 5 ಆರೋಗ್ಯ ಪ್ರಯೋಜನ ಪಡೆಯಿರಿ… | Health Benefits ಸಿಂಧೂರ ಗಿಡದ ವಿಶೇಷತೆ ಏನು? ಅನ್ನಾಟೊ ಅಥವಾ ಬಿಕ್ಸಾ ಒರೆಲ್ಲಾನಾ ಎಂದೂ ಕರೆಯಲ್ಪಡುವ ಸಿಂಧೂರ ಗಿಡವು ಭಾರತದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಈ ಗಿಡದ ಕೆಂಪು-ಕಿತ್ತಳೆ ಬಣ್ಣವನ್ನು ಸಿಂಧೂರವನ್ನು ತಯಾರಿಸಲು ಬಳಸಲಾಗುತ್ತದೆ. ಈ ಬಣ್ಣವನ್ನು ಸಿಂಧೂರ ಸಸ್ಯದ ಬೀಜಗಳಿಂದ ಪಡೆಯಲಾಗುತ್ತದೆ. ಇದನ್ನು ಸೌಂದರ್ಯವರ್ಧಕಗಳು ಮತ್ತು ಆಹಾರದಲ್ಲಿ ನೈಸರ್ಗಿಕ ಬಣ್ಣವಾಗಿಯೂ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಈ ಸಸ್ಯವು ಅದರ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಚರ್ಮದ ಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಪಾಕಿಸ್ತಾನದ ಯುದ್ಧಕ್ಕೆ ಪ್ರತೀಕಾರವಾಗಿ ನಡೆಸಿದ ದಾಳಿಗೆ ಮೋದಿ ಆಪರೇಷನ್ ಸಿಂಧೂರ ಎನ್ನು ಹೆಸರನ್ನೇ ಇಟ್ಟಿದ್ದರು. ಇದೀಗ ತಮ್ಮ ನಿವಾಸದಲ್ಲಿ ಕೂಡ ಸಿಂಧೂರ ಗಿಡವನ್ನು ನೆಟ್ಟಿದ್ದಾರೆ.

'ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಈ ವರ್ಷದ ವಿಶ್ವ ಪರಿಸರ ದಿನದ ವಿಷಯವಾಗಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಭಾರತ ನಿರಂತರವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

"ನಮ್ಮ ಪರಿಸರವನ್ನು ಹಸಿರು ಮತ್ತು ಉತ್ತಮಗೊಳಿಸಲು ತಳಮಟ್ಟದಲ್ಲಿ ಕೆಲಸ ಮಾಡುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ" ಎಂದು ಮೋದಿ ತಿಳಿಸಿದರು. (ಏಜೆನ್ಸೀಸ್​)