ನವದೆಹಲಿ: ದೇಶದ ಮೂರು ಹೈಟೆಕ್ ಕೊವಿಡ್-19 ಟೆಸ್ಟ್ ಲ್ಯಾಬ್ಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಉದ್ಘಾಟನೆ ಮಾಡಿದರು.
ನೊಯ್ಡಾ, ಮುಂಬೈ ಮತ್ತು ಕೋಲ್ಕತ್ತ ಗಳಲ್ಲಿನ ಹೈಟೆಕ್ ಲ್ಯಾಬ್ಗಳ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳ ಮುಖ್ಯಮಂತ್ರಿಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.
ನೊಯ್ಡಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಆ್ಯಂಡ್ ರಿಸರ್ಚ್, ಮುಂಬೈನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ರಿಪ್ರೊಡಕ್ಟಿವ್ ಹೆಲ್ತ್ ಮತ್ತು ಕೋಲ್ಕತ್ತರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾಲರಾ ಮತ್ತು ಎಂಟರಿಕ್ ಡಿಸೀಸಸ್ ಸಂಸ್ಥೆಗಳಲ್ಲಿ ಕೊವಿಡ್-19 ಟೆಸ್ಟ್ ಹೈಟೆಕ್ ಲ್ಯಾಬ್ಗಳನ್ನು ಪ್ರಾರಂಭಿಸಲಾಗಿದೆ.
ಲ್ಯಾಬ್ಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿಯವರು, ಕರೊನಾ ವಿರುದ್ಧದ ಸುದೀರ್ಘ ಮತ್ತು ಬಹುದೊಡ್ಡ ಹೋರಾಟದಲ್ಲಿ ಬಹುಮುಖ್ಯ ಭಾಗವೆಂದರೆ, ನಿರ್ಧಿಷ್ಟ ಆರೋಗ್ಯ ಮೂಲಕಸೌಕರ್ಯಗಳನ್ನು ತ್ವರಿತಗತಿಯಲ್ಲಿ ದೇಶದಲ್ಲಿ ನಿರ್ಮಾಣ ಮಾಡುವುದು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿಯೇ 15,000 ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಹೇಳಿದರು.
ಕರೊನಾ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಮೂರು ಟಿಗಳ ಪ್ರಯೋಗ ಮಾಡುತ್ತಿದೆ. ಟೆಸ್ಟ್-ಟ್ರ್ಯಾಕ್-ಟ್ರೀಟ್ ಎಂಬ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. (ಏಜೆನ್ಸೀಸ್)