ನ್ಯೂಸ್

ಮೋದಿಯವರೇ ಅಮಿತ್ ಶಾರನ್ನ ನಂಬಬೇಡಿ; ಮುಂದೆ ಅವರು ಮೀರ್ ಜಾಫರ್ ಆಗಬಹುದು; ಮಮತಾ ಬ್ಯಾನರ್ಜಿ|Mamata Banerjee

Mamata Banerjee: ಪ್ರಧಾನಿ ಮೋದಿಯವರೇ ಅಮಿತ್ ಶಾ ಅವರನ್ನು ಯಾವಗಲೂ ನಂಬಬೇಡಿ, ಮುಂದೆ ಅವರು ನಿಮಗೆ ಮೀರ್ ಜಾಫರ್ ಆಗಬಹುದು ಎಂದು ಕೇಂದ್ರ ಗೃಹ ಸಚಿವ ಶಾ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬುಧವಾರ (ಅ. 08) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗದ SIR ಪ್ರಕ್ರಿಯೆ ಬಗ್ಗೆ ಕೊಲ್ಕೊತ್ತಾದಲ್ಲಿ ಮಾತನಾಡಿದ ಅವರು,  ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಏನೇ ಮಾಡುತ್ತಿದೆಯೋ ಅದು ಶಾ ಅವರ ಆಜ್ಞೆಯ ಮೇರೆಗೆ ಮಾಡುತ್ತಿದೆ. ಶಾ ಅವರು ನಟನಾ ಪ್ರಧಾನ ಮಂತ್ರಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾ ಅವರನ್ನು 18ನೇ ಶತಮಾನದ ಮಿಲಿಟರಿ ಜನರಲ್ ಮೀರ್ ಜಾಫರ್‌ಗೆ ಹೋಲಿಸಿದ ಅವರು, ಪ್ಲಾಸಿ ಕದನದಲ್ಲಿ ನವಾಬ್ ಸಿರಾಜ್ ಉದ್-ದೌಲಾಗೆ ಹೇಗೆ ದ್ರೋಹ ಬಗೆಯಲಾಯತೋ, ಅದೇ ರೀತಿ ಪ್ರಧಾನಿಯವರೇ ಮುಂದೊಂದು ದಿನ ಶಾ ನಿಮಗೆ ಮೀರ್ ಜಾಫರ್ ಆಗಬಹುದು. ಅವರನ್ನು ಯಾವಾಗಲೂ ನಂಬಬೇಡಿ, ಜಾಗರೂಕರಾಗಿರಿ ಎಂದು ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪ್ರಮುಖ ಅಕ್ರಮಗಳು ನಡೆದಿವೆ. ಅವರ ನಾಯಕ ಸಭೆ ನಡೆಸಿ ಬಂಗಾಳದ ಮತದಾರರ ಪಟ್ಟಿಯಿಂದ ಹಲವಾರು ಲಕ್ಷ ಹೆಸರುಗಳನ್ನು ಅಳಿಸುವುದಾಗಿ ಹೇಳಲು ಇಲ್ಲಿಗೆ ಬರುತ್ತಾರೆ. ನಾವು ಪ್ರಸ್ತುತ ನೈಸರ್ಗಿಕ ವಿಕೋಪಗಳು, ಭಾರೀ ಮಳೆ ಸೇರಿ ಇತ್ಯಾದಿಗಳಿಂದ ತತ್ತರಿಸುತ್ತಿದ್ದೇವೆ. ಹದಿನೈದು ದಿನಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದೇ? ಮತ್ತು ಪ್ರಸ್ತುತ ಸಂದರ್ಭಗಳಲ್ಲಿ ಆ ಅವಧಿಯಲ್ಲಿ ಹೊಸ ಹೆಸರುಗಳನ್ನು ಅಪ್‌ಲೋಡ್ ಮಾಡಬಹುದೇ?" ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)