ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ( Diwali Plan) ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಆಚರಿಸಲಿದ್ದು, ಗೋವಾ ಕರಾವಳಿ ಭಾಗದ ನೌಕಾಪಡೆಯ ಸಿಬ್ಬಂದಿಗಳೊಂದಿಗೆ ಬೆಳಕಿನ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಯಶಸ್ಸನ್ನು ಆಚರಿಸುವುದು ಪ್ರಧಾನಿಯವರ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ 2014 ರಲ್ಲಿ ಪ್ರಧಾನಿ ಮೋದಿಯವರು ಲಡಾಖ್ನ ಸಿಯಾಚಿನ್ ಹಿಮನದಿಗೆ ತೆರಳಿ ಅಲ್ಲಿರುವ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು. ಹಾಗೇ 2015 ರಲ್ಲಿ ಇಂಡೋ-ಪಾಕ್ ಯುದ್ಧದ ವೀರರನ್ನು ಗೌರವಿಸಲು ಪಂಜಾಬ್‌ನ ಅಮೃತಸರದಲ್ಲಿರುವ ಡೋಗ್ರೈ ಸ್ಮಾರಕಕ್ಕೆ ಪ್ರಯಾಣ ಬೆಳೆಸಿದ್ದರು.
2016 ರಲ್ಲಿ ಹಿಮಾಚಲ ಪ್ರದೇಶದ ಸುಮ್ಡೋಗೆ ಭೇಟಿ ನೀಡಿದ ಮೋದಿಯವರು ಅಲ್ಲಿನ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯ ಜೊತೆ ದೀಪಾವಳಿ ಆಚರಿಸಿದರು. ಅದರ ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಅಲ್ಲಿನ ಪಡೆಗಳನ್ನು ಭೇಟಿ ಮಾಡಿದರು.
ಇದನ್ನೂ ಓದಿ: ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ 400 ಕೋಟಿ ರೂ. ಸಾಮ್ರಾಜ್ಯದವರೆಗೆ… ಕೋಟಿ ವೀರನ ಕತೆ ಬಲು ರೋಚಕ! Bihar Election
2018 ರಲ್ಲಿ, ಉತ್ತರಾಖಂಡದ ಹರ್ಸಿಲ್‌ನಲ್ಲಿರುವ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದರು. ಅದರ ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೈನಿಕರನ್ನು ಭೇಟಿ ಮಾಡಿದರು.
ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ದೀಪಾವಳಿಯನ್ನು ಆಚರಿಸಲು ಐತಿಹಾಸಿಕ ಯುದ್ಧದ ಸ್ಥಳವಾದ ರಾಜಸ್ಥಾನದ ಜೈಸಲ್ಮೇರ್ನ ಲೋಂಗೆವಾಕ್ಕೆ ತೆರಳಿದ್ದರು.
ಇದನ್ನೂ ಓದಿ: ಶಾಲೆಯಲ್ಲಿ ಪೆಪ್ಪರ್ ಸ್ಪ್ರೇಯಿಂದ ದಾಳಿ ಮಾಡಿದ ವಿದ್ಯಾರ್ಥಿ; ಹತ್ತು ಜನ ಆಸ್ಪತ್ರೆಗೆ ದಾಖಲು Pepper spray
2021 ರಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದರು. ಮುಂದಿನ ವರ್ಷ ಕಾರ್ಗಿಲ್ ಯುದ್ಧದ ಹುತಾತ್ಮರನ್ನು ಗೌರವಿಸಲು ಕಾರ್ಗಿಲ್ಗೆ ಹೋದರು. ಪ್ರಸ್ತುತ 2 ವರ್ಷಗಳಿಂದ ದೀಪಾವಳಿಯನ್ನು ಹಿಮಾಚಲ ಪ್ರದೇಶದ ಲೆಪ್ಚಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ಬೀಡುಬಿಟ್ಟಿರುವ ಸೈನಿಕರೊಂದಿಗೆ ಆಚರಿಸಿದ್ದಾರೆ. (ಏಜೆನ್ಸೀಸ್)