ನ್ಯೂಸ್

PM Modi 75th Birthday | ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಕೋರಿದ ರಾಹುಲ್​​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ

PM Modi 75th Birthday: ಇಂದು (ಸೆಪ್ಟೆಂಬರ್ 17) ತಮ್ಮ 75 ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಸೇರಿದಂತೆ, ಅನೇಕ ವಿರೋಧ ಪಕ್ಷದ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.

ರಾಹುಲ್​​​ ಗಾಂಧಿ..

ತಮ್ಮ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​​​​ ಹಂಚಿಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಉತ್ತಮ ಆರೋಗ್ಯವನ್ನು ಲಭ್ಯವಾಗಲಿ ಎಂದು ಹಾರೈಸುವುದಾಗಿ ಬರೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ..

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪೋಸ್ಟ್​​ ಹಂಚಿಕೊಂಡಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭ್ಯವಾಗಲಿ ಎಂದು ಬರೆದಿದ್ದಾರೆ.

ಶರದ್​​ ಪವಾರ್​​..

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಶರದ್ ಪವಾರ್, ನಿಮ್ಮ ಜನ್ಮದಿನದಕ್ಕೆ ನನ್ನ ಆತ್ಮೀಯ ಶುಭಾಶಯಗಳು, ನಿಮ್ಮ ಸಮರ್ಥ ಮಾರ್ಗದರ್ಶನದಲ್ಲಿ ನಮ್ಮ ರಾಷ್ಟ್ರದ ನಿರಂತರ ಪ್ರಗತಿಯನ್ನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಶತ್ರುಘ್ನ ಸಿನ್ಹಾ...

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಅವರಂತಹ ಇತರ ನಾಯಕರು ಕೂಡ ಸೇರಿಕೊಂಡರು. ಯಾದವ್, "ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು, ಜೊತೆಗೆ ಆರೋಗ್ಯಕರ, ಅರ್ಥಪೂರ್ಣ, ಸಾಮರಸ್ಯ, ಎಲ್ಲರನ್ನೂ ಒಳಗೊಂಡ ಮತ್ತು ಸಕಾರಾತ್ಮಕ ಜೀವನಕ್ಕಾಗಿ ಶುಭಾಶಯಗಳು" ಎಂದು ಬರೆದಿದ್ದಾರೆ. ಮೋದಿಯವರನ್ನು ಅಪ್ಪಿಕೊಂಡಿರುವ ತಮ್ಮ ಹಿಂದಿನ ಚಿತ್ರವನ್ನು ಹಂಚಿಕೊಂಡ ಸಿನ್ಹಾ, "ಒಮ್ಮೆ ಸ್ನೇಹಿತನಾಗಿದ್ದವನು ಯಾವಾಗಲೂ ನಿಜಕ್ಕೂ ಸ್ನೇಹಿತ!!!" ಎಂದು ಪೋಸ್ಟ್ ಮಾಡಿದ್ದಾರೆ.

ಮೋದಿ ಜನನ..

ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಸೆಪ್ಟೆಂಬರ್ 17, 1950 ರಂದು ಜನಿಸಿದರು.

ಪ್ರಧಾನಿ ಮೋದಿ ಇಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಕುಟುಂಬದ ಯೋಗಕ್ಷೇಮವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಎರಡು ಮಹತ್ವದ ಯೋಜನೆಗಳನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.(ಏಜೆನ್ಸೀಸ್​​​)