ನವದೆಹಲಿ: ಚೆನ್ನೈ ಮತ್ತು ಅಂಡಮಾನ್-ನಿಕೋಬಾರ್ನ ಪೋರ್ಟ್ಬ್ಲೇರ್ ಸಂರ್ಪಸುವ 2,312 ಕಿಲೋ ಮೀಟರ್ ಉದ್ದದ ಸಮುದ್ರದೊಳಗಿನ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಇದು ಅಂಡಮಾನ್- ನಿಕೋಬಾರ್ ದ್ವೀಪದ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸೇವೆಯನ್ನು ಸುಧಾರಿಸಲಿದೆ ಮತ್ತು ಬ್ರಾಡ್ಬ್ಯಾಂಡ್ ವೇಗ ಈಗಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚಾಗಲಿದೆ.ಇದು ಸ್ವಾತಂತ್ರ್ಯ ದಿನಕ್ಕೆ ಮುನ್ನವೇ ಅಂಡಮಾನ್-ನಿಕೋಬಾರ್ ದ್ವೀಪಗಳ ಜನರಿಗೆ ಮಹತ್ವದ ಕೊಡುಗೆಯಾಗಿದೆ ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಕೇಬಲ್ ಜಾಲ ಉದ್ಘಾಟಿಸಿದ ಪ್ರಧಾನಿ ಹೇಳಿದರು. ಹಿಂದೆ ಕರೆಗಳು ಬಹಳಷ್ಟು ಬಾರಿ ಕಡಿತಗೊಳ್ಳುತ್ತಿದ್ದವು (ಕಾಲ್ ಡ್ರಾಪ್). ಸಂಪರ್ಕ ವೇಗವೂ ಕಡಿಮೆಯಿತ್ತು. ಇನ್ನು ಮುಂದೆ ಈ ದ್ವೀಪದ ಜನರಿಗೆ ಇಂಥ ಸಮಸ್ಯೆ ಇರಲಾರದು ಎಂದರು. ಗ್ರೇಟ್ ನಿಕೋಬಾರ್ನಲ್ಲಿ -ಠಿ; 10 ಸಾವಿರ ಕೋಟಿ ವೆಚ್ಚದಲ್ಲಿ ದೊಡ್ಡ ಟ್ರಾನ್ಸ್ಶಿಪ್ವೆುಂಟ್ ಬಂದರು ನಿರ್ಮಾಣ ಮಾಡುವ ಉದ್ದೇಶ ಇದೆ ಎಂದು ಹೇಳಿದರು.
ಮೀನು ಸವಿದು ಹಾಯಾಗಿ ಪ್ರವಾಸ ಮಾಡಿ: ಮೇನ್ ಲ್ಯಾಂಡ್ಗೆ ಸಂಪರ್ಕ ಸಿಗುವುದಿಲ್ಲ ಬೇಗ ಕರೆ ಮಾಡಬೇಕು ಎಂಬ ಗಡಿಬಿಡಿಯಿಲ್ಲದೆ ಪ್ರವಾಸಿಗರು ಹಾಯಾಗಿ ಮೀನು ತಿಂದು, ದ್ವೀಪಗಳ ಸೊಬಗನ್ನು ಸವಿಯಬಹುದು. ಈ ಕೇಬಲ್ ಸಂಪರ್ಕ ಪ್ರವಾಸೋದ್ಯಮ ಮತ್ತು ಈ ಪ್ರದೇಶದ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಸಮುದ್ರದೊಳಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ 2,300 ಕಿ.ಮೀ. ಕೇಬಲ್ ಹಾಕುವುದು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಶ್ಲಾಘನೀಯ ಕಾರ್ಯ. | ನರೇಂದ್ರ ಮೋದಿ ಪ್ರಧಾನಿ