ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಪದಾಧಿಕಾರಿಗಳು ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು. ಗೋ. ರಮೇಶ್ ಗೌಡ, ಸಂತೋಷ್, ಮಣಿ ಗೌಂಡರ್, ರಾಜು ಗುಜ್ಜರ್, ದೇವೆಂದ್ರಪ್ಪ, ರಾಜುನಾಯ್ಕ ಇದ್ದರು. 
ನ್ಯೂಸ್

ಮಳೆ ನೀರು ಸಂಗ್ರಹ ಯೋಜನೆ ಜಾರಿಗೆ ಒತ್ತಾಯಿಸಿ ಮನವಿ

ಶಿವಮೊಗ್ಗ: ಜಿಲ್ಲೆಯ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಮಳೆಯ ಕಣ್ಣಾಮುಚ್ಚಾಲೆಯಿಂದ ಬರಗಾಲ, ಮತ್ತೊಮ್ಮೆ ಅತಿವೃಷ್ಟಿಯಾಗುತ್ತಿದೆ. ನಗರೀಕರಣ ಹೆಚ್ಚಾದಂತೆ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗುವ ಪ್ರಕ್ರಿಯೆ ಕಡಿಮೆಯಾಗುತ್ತಿದೆ. ಅಲ್ಲದೆ, ನಗರ ಹಾಗೂ ಗ್ರಾಮಗಳಲ್ಲಿದ್ದ ಶೇ.50ರಷ್ಟು ಕೆರೆಗಳು ಒತ್ತುವರಿಯಾಗಿವೆ. ಹಾಗಾಗಿ ಇಂದಿಗೆ ಮಳೆ ನೀರು ಸಂಗ್ರಹ ಯೋಜನೆ ಅತ್ಯವಶ್ಯ. ಸರ್ಕಾರಿ ಕಟ್ಟಡಗಳಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ತೆರೆದ ಬಾವಿಗಳಲ್ಲಿ ಸಾಕಷ್ಟು ನೀರು ಸಿಗುತ್ತಿತ್ತು. ಇಂದು ತೆರೆದ ಬಾವಿಗಳೇ ಕಣ್ಮರೆಯಾಗಿವೆ. ಬೋರ್‌ವೆಲ್‌ಗಳಲ್ಲಿ 100, 200 ಅಡಿಗೆ ಸಿಗುತ್ತಿದ್ದ ನೀರು ಇಂದು 1,000 ಅಡಿ ಹಂತಕ್ಕೆ ತಲುಪಿದೆ. ಬೋರ್‌ವೆಲ್‌ಗಳ ಸಂಖ್ಯೆ ಹೆಚ್ಚಾಗಿ ಅಂತರ್ಜಲ ಖಾಲಿಯಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಂತರ್ಜಲ ಸಂಪೂರ್ಣ ಖಾಲಿಯಾಗಲಿದೆ. ಹಾಗಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಯೋಜನೆ ಜಾರಿಗೊಳಿಸಬೇಕು. ಈ ಮೂಲಕ ಶುದ್ಧವಾದ ಮಳೆ ನೀರನ್ನು ಕುಡಿಯಲು ಮತ್ತು ಇತರೆ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದರು.
ವೇದಿಕೆ ಅಧ್ಯಕ್ಷ ಗೋ. ರಮೇಶ್ ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ಮಣಿ ಗೌಂಡರ್, ರಾಜು ಗುಜ್ಜರ್, ದೇವೆಂದ್ರಪ್ಪ, ರಾಜುನಾಯ್ಕ ಇತರರಿದ್ದರು.