ನ್ಯೂಸ್

ಡೈಪರ್ ನೋಡಿ.. ಬಾಂಬ್ ಅಂತ ಭಾವಿಸಿ ತುರ್ತು ಭೂಸ್ಪರ್ಶಿಸಿದ ವಿಮಾನ!

ನವದೆಹಲಿ: ಹಾರುತ್ತಿದ್ದ ವಿಮಾನದಲ್ಲಿ ಡೈಪರ್​​ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ವಿಮಾನದಲ್ಲಿ ಡೈಪರ್ ನೋಡಿದ ಪ್ರಯಾಣಿಕರು, ಸಿಬ್ಬಂದಿ ಬಾಂಬ್ ಎಂದು ಭಾವಿಸಿ ಭಯಭೀತರಾಗಿದ್ದಾರೆ. ನಂತರ ಶುಕ್ರವಾರ ತಡರಾತ್ರಿ ಕೊಪಾ ಏರ್‌ಲೈನ್ಸ್‌ನ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದಾಗ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ನಡೆದಿದ್ದೇನು?: ಕಳೆದ ಶುಕ್ರವಾರ (ಅಕ್ಟೋಬರ್ 13) ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾಗೆ ಕೋಪಾ ಏರ್​ಲೈನ್ಸ್​​ ವಿಮಾನವು ಹೊರಟಿದೆ. ವಿಮಾನ ಟೇಕ್ ಆಫ್ ಆದ ಒಂದು ಗಂಟೆಯ ನಂತರ ಸಿಬ್ಬಂದಿಗೆ ವಿಮಾನದ ಶೌಚಾಲಯದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಬಾಂಬ್ ಎಂದು ಭಾವಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು. ನಂತರ ವಿಮಾನವು ಪನಾಮಕ್ಕೆ ಮರಳಿತು. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ತಡರಾತ್ರಿ ಕೊಪಾ ಏರ್‌ಲೈನ್ಸ್‌ನಲ್ಲಿ ಡ್ರಿಪರ್ ತುರ್ತು ಲ್ಯಾಂಡಿಂಗ್ ಮಾಡಿದಾಗ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಪನಾಮದ ಟೊಕುಮೆನ್ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ತಕ್ಷಣ ಬಾಂಬ್ ಸ್ಕ್ವಾಡ್ ಶೋಧ ಕಾರ್ಯ ನಡೆಸಿತು. ವಿಮಾನದಲ್ಲಿದ್ದ ಎಲ್ಲಾ 144 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ನಂತರ, ಸ್ಫೋಟಕ ನಿಗ್ರಹ ತಂಡ ಮತ್ತು ವಿಮಾನ ನಿಲ್ದಾಣದ ಭದ್ರತಾ ಪಡೆ ವಿಮಾನದಲ್ಲಿ ಶೋಧ ನಡೆಸಿತು. ವಿಮಾನದ ಶೌಚಾಲಯದಲ್ಲಿ ಅನುಮಾನಾಸ್ಪದ ವಸ್ತುವನ್ನು ಪರಿಶೀಲಿಸಿದಾಗ ವಯಸ್ಕರರ ಡೈಪರ್​​ ಎಂದು ಕಂಡುಬಂದಿದೆ. ನಂತರ ವಿಮಾನದಲ್ಲಿ ಯಾವುದೇ ಸ್ಫೋಟಕಗಳು ಇರಲಿಲ್ಲ ಎಂಬುದು ದೃಢಪಟ್ಟಿತ್ತು.

ಈ ಬಗ್ಗೆ ಭದ್ರತಾ ಅಧಿಕಾರಿಯೊಬ್ಬರು ಮಾತನಾಡಿ, 'ವಿಮಾನವನ್ನು ರನ್‌ವೇಯಲ್ಲಿ ಸುರಕ್ಷಿತವಾಗಿ ಇಳಿಸಿದ್ದೇವೆ. ವಿಶೇಷ ಬಾಂಬ್ ಸ್ಕ್ವಾಡ್ ತಂಡವು ಅಲ್ಲಿ ವಿಮಾನವನ್ನು ಪರಿಶೀಲಿಸಿತು. ಇದನ್ನು ವಯಸ್ಕ ಡಯಾಪರ್ ಎಂದು ಗುರುತಿಸಲಾಗಿದೆ. ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ. ಬಳಿಕ ಪ್ರಯಾಣಿಕರಿಗೆ ವಿಮಾನ ಹತ್ತಲು ಅವಕಾಶ ನೀಡಲಾಯಿತು. ಇದರಿಂದಾಗಿ ವಿಮಾನ ಸ್ವಲ್ಪ ವಿಳಂಬವಾಗಿ ಫ್ಲೋರಿಡಾಕ್ಕೆ ಹೊರಟಿತು. ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು ಎಂದು ವಿಮಾನ ನಿಲ್ದಾಣದ ಭದ್ರತಾ ತಂಡದ ಮುಖ್ಯಸ್ಥ ಜೋಸ್ ಕ್ಯಾಸ್ಟ್ರೋ ತಿಳಿಸಿದ್ದಾರೆ.