ನ್ಯೂಸ್

ಢಾಕಾದಲ್ಲಿ ವಿಮಾನ ಪತನ: 16 ವಿದ್ಯಾರ್ಥಿಗಳು, 2 ಶಿಕ್ಷಕರು ಸೇರಿ 19 ಸಾವು! | Plane Crash

ಢಾಕಾ; ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವೊಂದು(Plane Crash ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಶಾಲಾ ಆವರಣಕ್ಕೆ ಅಪ್ಪಳಿಸಿದ ಪರಿಣಾಮ 16 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಮತ್ತುಬ ಪೈ,ಲಟ್​ ಸೇರಿ 19 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಪೈಲಟ್ - ಫ್ಲೈಟ್ ಲೆಫ್ಟಿನೆಂಟ್ ಮೊಹಮ್ಮದ್ ಟೌಕಿರ್ ಇಸ್ಲಾಂ ಎಂದು ಗುರುತಿಸಲಾಗಿದೆ. 16 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ಸೇನಾ ಆಸ್ಪತ್ರೆ ಸೇರಿದಂತೆ ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ಮೊಹಮ್ಮದ್​ ಯೂನಸ್​​ ವಿಮಾನ ಪತನದ ಕುರಿತು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮಡಿದ ಮೃತರಿಗೆ ಸಂತಾಪ ಸೂಚಿಸಿದ್ದಾರೆ.

"ವಾಯುಪಡೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಸಿಬ್ಬಂದಿ ಮತ್ತು ಈ ಅಪಘಾತದಿಂದ ಹಾನಿಗೊಳಗಾದ ಇತರರು ಅನುಭವಿಸಿದ ನಷ್ಟವನ್ನು ಸರಿಪಡಿಸಲಾಗದು" ಎಂದು ಯೂನಸ್​​​​ ಹೇಳಿದರು. (ಏಜೆನ್ಸೀಸ್​)