ಮಾನ್ವಿ ಗಗ್ರೂ 
ನ್ಯೂಸ್

ಹಣ ಕೊಡುವ, ಕಾಂಪ್ರಮೈಸ್ ಆಗಿ! : ಕಾಸ್ಟಿಂಗ್ ಡೈರೆಕ್ಟರ್ ನೀಡಿದ್ದ ಕೆಟ್ಟ ಆಫರ್‌ಗೆ ‘ಪಿಕೆ’ ನಟಿ ಮಾನ್ವಿ ಗಗ್ರೂ ಕಿಡಿ

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಕೆಲ ನಟಿಯ ಅಸಮಾಧಾನ
  • ಅವಕಾಶ ಬೇಕೆಂದರೆ ಕಾಂಪ್ರಮೈಸ್ ಆಗಿ ಎಂದವನ ವಿರುದ್ಧ ನಟಿ ಗರಂ
  • ಮೊದಲು ನಟಿಗೆ ಮೇಸೆಜ್​ ಮಾಡಿ, ಆಮೇಲೆ ಡಿಲೀಟ್ ಮಾಡಿದ ದುರುಳ
ಸಿನಿಮಾ ಅಥವಾ ಗಟ್ಟಿ ಹಿನ್ನೆಲೆ ಇಲ್ಲದ ಕಲಾವಿದರು ಚಿತ್ರರಂಗ ಪ್ರವೇಶಿಸುವುದು ಎಂದರೆ ಕಠಿಣ ಹಾದಿ. ಎಷ್ಟೇ ಪ್ರಯತ್ನ ಪಟ್ಟರೂ, ಆಡಿಷನ್ ನೀಡಿದರೂ, ಎಂತಹ ಪ್ರತಿಭೆ ಇದ್ದರೂ ಅವಕಾಶಗಳು ದೂರದ ಬೆಟ್ಟ. ಇಂತಹ ಅನಿಶ್ಚಿತತೆಯಲ್ಲಿರುವ ಕಲಾವಿದರಿಗೆ ಕೆಲವರು ಅಡ್ಡದಾರಿ ಹಿಡಿಸಲು ಯತ್ನಿಸುವ ಉದಾಹರಣೆಗಳು ಇವೆ. ಕಾಸ್ಟಿಂಗ್ ವೇಳೆ ಕೆಟ್ಟದಾಗಿ ನಡೆಸಿಕೊಂಡವರ ಬಗ್ಗೆ ಕೆಲ ನಟಿಯರು ಈಗಾಗಲೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ‘ಪಿಕೆ’ ನಟಿ ಮಾನ್ವಿ ಗಗ್ರೂ ಸರದಿ. ಬಾಲಿವುಡ್ ಪ್ರವೇಶಿಸಬೇಕು ಎಂದು ಮಾನ್ವಿ ಉತ್ಸಾಹದಲ್ಲಿರುವಾಗ ಕಾಸ್ಟಿಂಗ್ ಡೈರೆಕ್ಟರ್ ಒಬ್ಬ ‘ಕಾಂಪ್ರಮೈಸ್’ ಆಗುವಂತೆ ಹೇಳಿದ್ದನಂತೆ. ಅದಕ್ಕೆ ವಿಚಲಿತಳಾಗಿದ್ದ ಮಾನ್ವಿ, ‘ಕಾಂಪ್ರಮೈಸ್’ ಎಂದರೇನು? ಎಂಬ ಮರು ಪ್ರಶ್ನೆಗೆ ಆತ ಎಲ್ಲ ಮೆಸೇಜ್ ಡಿಲೀಟ್ ಮಾಡಿ ಪರಾರಿಯಾದನಂತೆ. ಈ ಅನುಭವದ ಬಗ್ಗೆ, ‘ನನಗೆ ಮೆಂಟರ್‌ನಂತಿದ್ದ ಕಾಸ್ಟಿಂಗ್ ಡೈರೆಕ್ಟರ್ ಒಮ್ಮೆ ಮೆಸೇಜ್ ಮಾಡಿ, ‘ನೀವು ಎಲ್ಲದಕ್ಕೂ ಹೊಂದಾಣಿಕೆಯಿಂದ ಇರುವುದಾದರೆ 1 ಲಕ್ಷ ರೂ. ಪಡೆಯುತ್ತೀರಿ’ ಎಂದಿದ್ದ. ಅದಕ್ಕೆ ನಾನು ಹೊಂದಾಣಿಕೆ ಎಂದರೇನು? ಎಂದಿದ್ದೆ. ಅದಕ್ಕೆ ಆತ ಉತ್ತರಿಸಲಿಲ್ಲ. ಬಳಿಕ ಆತನ ನಂಬರ್ ಬ್ಲಾಕ್ ಮಾಡಿ, ರಿಪೋರ್ಟ್ ಮಾಡಿದೆ. ಕೆಲವರು ಫೋನ್‌ನಲ್ಲಿ ಯಾವುದೇ ಪುರಾವೆ ಇರಬಾರದು ಎಂದು ಡಿಲೀಟ್ ಮಾಡುತ್ತಾರೆ. ಸಾಕ್ಷಿಗಾದರೂ ಅವರನ್ನು ರಿಪೋರ್ಟ್ ಮಾಡಬಾರದು’ ಎಂದು ಮಾನ್ವಿ ಹಂಚಿಕೊಂಡಿದ್ದಾರೆ. ಹಿಂದಿಯ ‘ಕಿಲ್ ದಿಲ್’, ‘ಪಿಕೆ’, ‘ಹೀರ್ ಸಾರಾ’ ಸೇರಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ಮಾನ್ವಿ ಗಗ್ರೂ ನಟಿಸಿದ್ದಾರೆ.-ಏಜೆನ್ಸೀಸ್