ಕೋಲಾರ ನಗರಸಭೆ ಕಚೇರಿ 
ನ್ಯೂಸ್

ಲೋಕಾಗೆ ದೂರು ನೀಡಲು ಮೀನಮೇಷ

ಕಿರುವಾರ ಎಸ್​.ಸುದರ್ಶನ್​ ಕೋಲಾರ

ನಗರಸಭೆಯಲ್ಲಿನ ಹಲವು ಹಗರಣಗಳ ತನಿಖೆಗಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿದ್ದರೂ ಆಡಳಿತ ಮಂಡಳಿ ವಿಲಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಸದಸ್ಯರಿಂದ ಕೇಳಿ ಬಂದಿದೆ.

ಸ್ವಚ್ಛ ಭಾರತ್​ ಯೋಜನೆಯಡಿ ಸ್ವಚ್ಛತಾ ಸಲಕರಣೆ ಖರೀದಿ, ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರ ತಯಾರಿಸಿ ಸಾರ್ವಜನಿಕರಿಗೆ ವಿತರಣೆ ಮಾಡಿರುವ ಆಹಾರಕ್ಕೆ ಅಕ್ರಮ ಬಿಲ್​ ಸೃಷ್ಟಿ, ನೆಲಸಮ ಮಾಡಲು ಅಕ್ರಮವಾಗಿ ಬಿಲ್​ಪಾವತಿ ಮಾಡಿರುವುದು, ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಇ&ಖಾತೆ ನೀಡಿರುವ ಅಕ್ರಮ ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಬಗ್ಗೆ ಕೆಲ ಸದಸ್ಯರು ಪ್ರತ್ಯೇಕ ವಿಚಾರ ಮುಂದಿಟ್ಟುಕೊಂಡು ಪೌರಾಡಳಿತ ನಿರ್ದೇಶನಾಲಯ, ಸ್ಥಳಿಯ ಸಂಸ್ಥೆಗಳ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಗರಸಭೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ವಿಚಾರವು 2024ರ ಅಕ್ಟೋಬರ್​ 8ರಂದು ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ ಅಧ್ಯಕ್ಷತೆಯಲ್ಲಿ ಸುಧೀರ್ ಚರ್ಚೆಯಾಗಿ, ಲೋಕಾಯುಕ್ತರಿಗೆ ದೂರು ನೀಡಲು ತೀರ್ಮಾಸಿ 3 ತಿಂಗಳು ಕಳೆದರೂ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಭೆಯಲ್ಲಿ ಚರ್ಚೆಯಾದ ನಂತರ ಅಧ್ಯೆ ಲಕ್ಷಿ$್ಮದೇವಮ್ಮ, ಉಪಾಧ್ಯೆ ಸಂಗೀತಾ ಸೇರಿ ಸದಸ್ಯರೆಲ್ಲ ಒಮ್ಮತ ತೀರ್ಮಾನ ಕೈಗೊಂಡು, ಲೋಕಾಯುಕ್ತರಿಗೆ ದೂರು ನೀಡಲು ಒಪ್ಪಿಗೆ ಸೂಚಿಸಿದ್ದರು. ಆದರೆ ಇನ್ನೂ ದೂರು ನೀಡದೆ ಇರುವ ಬಗ್ಗೆ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಈಗ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.

ಸಭೆ ನಡೆದು 3 ತಿಂಗಳು ಕಳೆದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅದ ರ್ನಿಣಯವನ್ನು ಗಂಭೀರವಾಗಿ ಪರಿಗಣಿಸಿ ಇಷ್ಟೊತ್ತಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರವಾಗಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿ, ಸಿಬ್ಬಂದಿ ತಪು$್ಪ ಮಾಡಲು ಹೆದರುತ್ತಿದ್ದರು ಎಂಬುದು ಕೆಲ ಸದಸ್ಯರ ವಾದವಾಗಿದೆ. ಚುನಾಯಿತ ಮಂಡಳಿಯಿಂದ ತಡವಾಗಿರುವುದರಿಂದ ಸದಸ್ಯರೊಬ್ಬರು ವೈಯಕ್ತಿಕವಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ.

* ಯಾರ ರಕ್ಷಣೆಗೆ ಮುಂದು?

ಸ್ವಚ್ಛ ಭಾರತ್​ ಮಿಷನ್​&1.0 ಯೋಜನೆಯಡಿ 2.40 ಕೋಟಿ ರೂ. ಪೈಕಿ ಇವಿ ಟಾಟಾ ಎಸಿ 2 ಚಾರ್ಜರ್​ಗಳಿಗೆ 6.25 ಲಕ್ಷ ರೂ., 35 ಎಚ್​ಪಿ ಜೆಸಿಬಿ ಯಂತ್ರಕ್ಕೆ 35 ಲಕ್ಷ ರೂ., 6 ಸಿಸಿ ಕ್ಯಾಮರಾಗಳಿಗೆ ತಲಾ 94 ಸಾವಿರ ರೂ., ಪುಷ್​ಕಾರ್ಟ್​ಗಳ ಖರೀದಿಯಲ್ಲಿ ಅಕ್ರಮ ಕಂಡುಬಂದಿದ್ದು, ಈ ಬಗ್ಗೆ ವಿಜಯವಾಣಿ ಸಹ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಸಂಬಂಧ ಇಂಜಿನಿಯರ್​ ದಿಲೀಪ್​ ಕುಮಾರ್​ ವಿರುದ್ಧ ಕ್ರಮವಹಿಸಿದರಾದರೂ, ಉಳಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ?, ಯಾರನ್ನು ರಕ್ಷಣೆ ಮಾಡಲು ಮುಂದಾಗಿದ್ದೀರಿ? ಎಂಬುದು ಕೆಲ ಸದಸ್ಯರ ಪ್ರಶ್ನೆ.

* ದಾಖಲೆ ಇದ್ದರೂ ಕ್ರಮಕ್ಕೆ ಮೀನಮೇಷ

ನತ್ಯಾಜ್ಯ ಮತ್ತು ವಿಲೇವಾರಿ ಸ್ಥಳದ ಸಮೀಪದ ಜಾಗವನ್ನು ನೆಲಸಮಗೊಳಿಸಲು ನಗರಸಭೆಯ ಆರೋಗ್ಯ ನಿರೀಕ್ಷಕ ಬಿಲ್​ಗಳನ್ನು ಸೃಷ್ಟಿ ಮಾಡಿ, ಅ.9ರಂದು 93,456 ರೂ. ಅ.13ರಂದು 86,848 ರೂ. ಮೊತ್ತವನ್ನು ಪಾವತಿ **** ಅಕ್ರಮ ಎಸಗಿರುವುದು ಕಂಡು ಬಂದಿರುತ್ತದೆ. ಈ ವಿಚಾರವಾಗಿ ಅಕ್ರಮ ಬಿಲ್​ ಸಲ್ಲಿಸಿರುವ ವಿಚಾರವಾಗಿ ಸರ್ಕಾರದಿಂದ ಅನುಮತಿ ಪಡೆದು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಸರ್ವಾನುಮತದಿಂದ ರ್ನಿಣಯ ಕೈಗೊಳ್ಳಲಾಗಿತ್ತು. ಗುತ್ತಿಗೆದಾರನಿಗೆ ಬಿಲ್​ ಪಾವತಿ ಮಾಡಲು ಪೂರಕವಾದ ದಾಖಲೆ ಇದ್ದರೂ ಮೀನಮೇಷ ಎಣಿಸಲಾಗುತ್ತಿದೆ. ಅಲ್ಲಿಗೆ ಸಾಮಾನ್ಯ ಸಭೆಯ ರ್ನಿಣಯಗಳಿಗೆ ಬೆಲೆಯಿಲ್ಲವೆ? ಎಂದು ಕೆಲ ಸದಸ್ಯರು ಪ್ರಶ್ನಿಸಿದ್ದಾರೆ.

* ಇಂದಿರಾ ಕ್ಯಾಂಟೀನ್​ನಲ್ಲೂ ಅವ್ಯವಹಾರ

ಕೋಲಾರ ನಗರದಲ್ಲಿನ ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರ ತಯಾರು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 2022ರ ಏಪ್ರಿಲ್​ 4ರಿಂದ 2023 ಮೇ 31ರತನಕ 4,95,328 ರೂ. 2023ರ 2023ರ ಸೆಪ್ಟೆಂಬರ್​ 1ರಿಂದ 2024ರ ೆಬ್ರವರಿ 31ರವರೆಗೆ 19,92,958 ಹಾಗೂ 2024ರ ಏಪ್ರಿಲ್​ 1ರಿಂದ 2024ರ ಮೇ31ರತನಕ 5,68,825 ರೂ. ಹೀಗೆ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಬಿಲ್​ ಪಾವತಿ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದರ ವಿರುದ್ಧವೂ ಕ್ರಮ ಜರುಗಿಸಲು ವ್ಯಾಪಕ ಒತ್ತಾಯ ಕೇಳಿ ಬಂದಿದೆ.

* ಅನಧಿಕೃತ ಬಡಾವಣೆಗೆ ಇ-ಖಾತೆ ಹಂಚಿಕೆ

ಕೋಲಾರ ನಗರ ಸಭೆಯಲ್ಲಿ ಇ&ಖಾತೆ ನೀಡಲಾಗಿರುವ ಬಗ್ಗೆಯಂತೂ ಭಾರಿ ಸದ್ದು ಮಾಡಿತ್ತು. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ, ಬಡಾವಣೆ ಅಭಿವೃದ್ಧಿಪಡಿಸದೆ, ಪಾರ್ಕ್​, ಸಿಎ ಸೈಟ್​ ಮೀಸಲಿಡದೆ ವಾರ್ಡ್​ ನಂ&15ರ ವ್ಯಾಪ್ತಿಯಲ್ಲಿನ ಸರ್ವೇ ನಂ.19/1ಎ, 19/2ಸಿ, 20/1, 20/2ರ ಪೈಕಿ ಜಮೀನಿನಲ್ಲಿ 16 ನಿವೇಶನ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಇ&ಖಾತೆ ನೀಡಲು ಕಾನೂನು ಬಾಹಿರವಾಗಿ ಒಂದು ರಾತ್ರಿ ಸುಮಾರು 8 ಗಂಟೆಗೆ ಆನ್​ಲೈನ್​ನಲ್ಲಿ ಆಗಿನ ಪೌರಾಯುಕ್ತ ಶಿವಾನಂದ, ಕಂದಾಯ ಅಧಿಕಾರಿ ಅನಿಲ್​ ಕುಮಾರ್​, ಕಂದಾಯ ನಿರೀಕ್ಷಕ ಅಭಿಷೇಕ್​ ಶಾಂತರಾಮ್​ ಮಾನೆ ಹಾಗೂ ಕರ ವಸೂಲಿಗಾಗ ಬಿ.ಎಸ್​.ಮಂಜುನಾಥ್​ ಅವರು ಮಾಲೀಕ ಶಿವರಾಜ್​ ಅವರೊಂದಿಗೆ ಶಾಮೀಲಾಗಿ ಇ&ಖಾತೆ ತೆಗೆದಿರುವುದು ಕಂಡು ಬಂದಿದ್ದು, ಇದರ ವಿರುದ್ಧವೂ ಲೋಕಾಯುಕ್ತರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ.

ಕೋಟ್​...

ಸಭೆಯಲ್ಲಿ ಚರ್ಚಿಸಿದ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಕ್ರಮವಹಿಸಲಾಗಿದ್ದು, ಶಾಸಕರಿಗೆ ಪತ್ರ ಕಳುಹಿಸಲಾಗಿದೆ. ಶಾಸಕರು ಬೆಂಗಳೂರಿನಲ್ಲಿ ಕೊಡುವುದಾಗಿ ಹೇಳಿದ್ದಾರೆ. ನಮ್ಮ ವಿರೋಧಿಗಳು ಏನೇನೋ ಹೇಳುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯಿಸುವುದಿಲ್ಲ.

> ಲಕ್ಷ್ಮಿದೇವಮ್ಮ, ನಗರಸಭೆ ಅಧ್ಯೆ, ಕೋಲಾರ

ಕೋಟ್​...

ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡರೆ ಅದಕ್ಕೊಂದು ಬೆಲೆ ಇರುತ್ತದೆ. ತೀರ್ಮಾನವಾಗಿಯೂ ಕ್ರಮಕೈಗೊಳ್ಳದೆ ಇದ್ದರೆ ಏನರ್ಥ?. ಭ್ರಷ್ಟ ಅಧಿಕಾರಿಗಳನ್ನು ಶಿೆಗೆ ಒಳಪಡಿಸಬೇಕು.

> ಎಂ.ಸುರೇಶ್​ ಬಾಬು, ನಗರಸಭೆ ಸದಸ್ಯ, ಕೋಲಾರ