ನ್ಯೂಸ್

ಪೈಪ್‌ಲೈನ್ ಒಳಗೆ ಸಿಲುಕಿದ್ದ ರೈತನ ರಕ್ಷಣೆ

Ramanagara

ರಾಮನಗರ : ತಾಲೂಕಿನ ಕೊಂಕಾಣಿದೊಡ್ಡಿಯಲ್ಲಿ ಜಮೀನಿಗೆ ನೀರಿನ ಪೈಪ್ ಅಳವಡಿಸಲು ಹೋಗಿ 200 ಅಡಿ ಉದ್ದದ ಪೈಪ್‌ಲೈನ್‌ನೊಳಗೆ ಸಿಲುಕಿದ್ದ ರೈತನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ ಕೊಂಕಾಣಿದೊಡ್ಡಿ ಬಳಿಯ ಬೈಪಾಸ್ ರಸ್ತೆಯಲ್ಲಿ ಸಿಂಗ್ರಾಬೋವಿದೊಡ್ಡಿ ಗ್ರಾಮದ ತಿಮ್ಮಯ್ಯ ಎಂಬುವವರ ಮಗ ಗೋವಿಂದರಾಜು(ರಾಜಣ್ಣ) ತೋಟದಲ್ಲಿ ಹೊಸದಾಗಿ ಕೊರೆಸಿದ್ದ ಬೋರ್‌ವೆಲ್‌ನಿಂದ ಮತ್ತೊಂದು ಜಮೀನಿಗೆ ನೀರು ಸರಬರಾಜು ವಾಡಲು ಬೈಪಾಸ್ ರಸ್ತೆ ನಿರ್ವಾಣ ವೇಳೆ ರಸ್ತೆಯ ಕೆಳಭಾಗದಲ್ಲಿ ಹಳ್ಳದ ನೀರು ಹರಿದು ಹೋಗಲು ಅಳವಡಿಸಿದ್ದ 200 ಅಡಿ ಉದ್ದದ ಪೈಪ್‌ನ ಒಳಭಾಗದಿಂದ ನೀರಿನ ರೋಲ್ ಪೈಪ್ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ.

ಈ ವೇಳೆ ಪೈಪ್‌ನ ಒಳಗೆ ಮಣ್ಣಿನಲ್ಲಿ ಸಿಲುಕಿ ಹೊರಬರಲಾಗದೆ ಸಹಾಯ ವಾಡುವಂತೆ ಕೂಗಿಕೊಂಡಾಗ ರೈತನ ಪುತ್ರ ವೇಣುಗೋಪಾಲ್ ಅಗ್ನಿಶಾಮಕ ಸಿಬ್ಬಂದಿಗೆ ವಾಹಿತಿ ನೀಡಿದ್ದಾನೆ.

ಅಗ್ನಿಶಾಮಕ ದಳದ ಡಿವೈಎಸ್ಪಿ ಕೆ.ಬಿ. ಮಂಜುನಾಥ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೈಪಾಸ್ ರಸ್ತೆ ಕೆಲಸ ವಾಡುತ್ತಿದ್ದ ಎರಡು ಹಿಟಾಚಿ ಯಂತ್ರಗಳ ಸಹಕಾರದಿಂದ ಮಣ್ಣು ಮತ್ತು ಸಿಮೆಂಟ್ ಪೈಪ್‌ಗಳನ್ನು ತೆರವುಗೊಳಿಸಿದರು. ಸತತವಾಗಿ ಎರಡು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ಫಲವಾಗಿ ರೈತ ಗೋವಿಂದರಾಜು ಅವರನ್ನು ಪ್ರಾಣಾಪಾಯದಿಂದ ರಕ್ಷಣೆ ವಾಡಿದರು. ಸ್ಥಳದಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸವಾಗಿತ್ತು.

ಬೈಪಾಸ್ ರಸ್ತೆ ಕೆಳಭಾಗದ ಪೈಪ್‌ಲೈನ್ ಮೂಲಕ ಜಮೀನಿಗೆ ನೀರಿನ ಪೈಪ್ ತೆಗೆದುಕೊಂಡು ಹೋಗುತ್ತಿದ್ದೆ. ಒಳಗೆ ತೆರಳುತ್ತಿದ್ದಾಗ ಕೆಸರು ಮಣ್ಣಿನಲ್ಲಿ ಸಿಲುಕಿ ಮುಂದೆ ಹೋಗಲಾರದೆ ಹಿಂದಕ್ಕೂ ಬಾರಲಾಗದೆ ಉಸಿರುಗಟ್ಟುವಂತಾಯಿತು. ಈ ವೇಳೆ ಹೊರಬರಲು ಸಹಾಯ ಮಾಡುವಂತೆ ಕೂಗಾಡಿದಾಗ ಅಗ್ನಿಶಾಮಕ ದಳ ಬಂದು ರಕ್ಷಿಸಿತು.

ಗೋವಿಂದರಾಜು ಪ್ರಾಣಾಪಾಯದಿಂದ ಪಾರಾದ ರೈತ

ಸಾರ್ವಜನಿಕರ ಮೆಚ್ಚುಗೆ

ಬೈಪಾಸ್ ರಸ್ತೆಯ ಪೈಪ್‌ಲೈನ್‌ನಲ್ಲಿ ಸಿಲುಕಿದ್ದ ರೈತ ಗೋವಿಂದರಾಜು ಅವರನ್ನು ಸತತ 2 ಗಂಟೆ ಕಾರ್ಯಚರಣೆ ನಡೆಸಿ ರಕ್ಷಿಸಿದ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿಎಂ ಮೆಚ್ಚುಗೆ : ಜೀವ ಉಳಿಸಿದ ರಾಮನಗರ ಜಿಲ್ಲಾ ಅಗ್ನಿ ಶಾಮಕ ಸಿಬ್ಬಂದಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿನಂದಿಸಿದ್ದು, ಸದ್ಯದ ಲ್ಲಿಯೇ ಅಗ್ನಿಶಾಮಕ ಸಿಬ್ಬಂದಿಯನ್ನು ಗೌರವಿಸಿ, ಪ್ರಶಂಸನಾ ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹಾಗೆಯೇ ಸಾರ್ವಜನಿಕರಿಂದಲೂ ಅಗ್ನಿಶಾಮಕ ದಳದ ಡಿವೈಎಸ್ಪಿ ಕೆ.ಬಿ. ಮಂಜುನಾಥ್ ಹಾಗೂ ಸಿಬ್ಬಂದಿ ಪ್ರಭು, ರಾಜಕುವಾರ್, ಬಸವರಾಜು, ಗಜಾನನ, ಅಶೋಕ್, ಎಂ.ಡಿ.ರಾಜು ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪೈಪ್ ಒಳಗೆ ಮರಳು ಮಿಶ್ರಿತ ಮಣ್ಣು ಇದ್ದಿದ್ದರಿಂದ ಗೋವಿಂದರಾಜು ಸಿಲುಕಿದ್ದನ್ನು ಅರಿತು ಅವರಿಗೆ ಉಸಿರಾಟ ನಡೆಸಲು ಸಹಕಾರವಾಗುವಂತೆ 3 ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಸಿ, ನಂತರ ಕಾರ್ಯಾಚರಣೆ ನಡೆಸಿದೆವು. ಟನೆ ತಿಳಿದ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದರಿಂದ ರೈತನನ್ನು ರಕ್ಷಣೆ ವಾಡಲು ಸಾಧ್ಯವಾಯಿತು. ಕೆ.ಬಿ.ಮಂಜುನಾಥ್ ಡಿವೈಎಸ್ಪಿ, ಅಗ್ನಿಶಾಮಕ ದಳ